ಮುಲ್ಕಿಯಲ್ಲಿ ಮಳೆ ಹಾನಿ

ಸಾಂದರ್ಭಿಕ ಚಿತ್ರ

ಮುಲ್ಕಿ : ಇಲ್ಲಿನ ಹೋಬಳಿಯಲ್ಲಿ ಬುಧವಾರ ಬೆಳಗ್ಗೆ ಭಾರೀ ಮಳೆಯೊಂದಿಗೆ ಗುಡುಗು ಸಿಡಿಲು ಉಂಟಾಗಿದ್ದು, ಭಾರೀ ಹಾನಿ ಸಂಭವಿಸಿದೆ.ಬೆಳಗ್ಗೆ ಸುಮಾರು 2 ಗಂಟೆಗೆ ಸಿಡಿಲು ಮಿಂಚು ಉಂಟಾಗಿದ್ದು, ಮುಲ್ಕಿ ಕೇಬಲ್ ಮಾಲಿಕರಿಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಸುಮಾರು 50ರಿಂದ 75ರವರೆಗೆ ಎಂಪ್ಲಿಫಯರ್ ಕೆಟ್ಟು ಹೋಗಿದ್ದು, ಸರಿಪಡಿಸಲು ಶ್ರಮಪಡಬೇಕಾಯಿತು. ಮುಲ್ಕಿ ಹೋಬಳಿಯ ಕಿನ್ನಿಗೋಳಿ, ಹಳೆಯಂಗಡಿ, ಅತಿಕಾರಿಬೆಟ್ಟು ಪರಿಸರದಲ್ಲಿ ಗುಡುಗು ಸಿಡಿಲಿನಿಂದ ಜನ ಭಯಭೀತರಾಗಿದ್ದು ಸಣ್ಣಪುಟ್ಟ ಹಾನಿ ಸಂಭವಿಸಿದೆ.