ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರೈಲು ತಡೆ

ಕರಾವಳಿ ಅಲೆ ವರದಿ

ಕಾಸರಗೋಡು : ರೈಲ್ವೇ ಖಾಸಗೀಕರಣವನ್ನು ಕಡಿಮೆಗೊಳಿಸಬೇಕು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತಡೆಯಬೇಕು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಡಿವೈಎಫೈ ಕಾರ್ಯಕರ್ತರು ಕಾಞಂಗಾಡಿನಲ್ಲಿ ರೈಲು ತಡೆ ನಡೆಸಿದರು.

ಜಿಲ್ಲಾ ಸಮಿತಿಯ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಪಿ ಪಿ ದಿವ್ಯಾ ಮಾತನಾಡಿ, “ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳಗೊಳಿಸಿ ಸಾಮಾನ್ಯ ಜನತೆಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ನಿತ್ಯೋಪಯೋಗಿ ಸಾಮಾನುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದನ್ನು ಎಲ್ಲರೂ ಪ್ರತಿಭಟಿಸಬೇಕಾಗಿದೆ. ಇಲ್ಲವಾದರೆ ಸಾಮಾನ್ಯ ಜನತೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಮ್ಮ ದೇಶಕ್ಕೆ ಬರಲಿದೆ” ಎಂದರು. ಕೋಝಿಕ್ಕೋಡ್, ತಿರುವನಂತಪುರ, ಕಣ್ನೂರು, ಪತ್ತಣಂತಿಟ್ಟ ಮೊದಲಾದ ಸ್ಥಳಗಳಲ್ಲೂ ಡಿವೈಎಫೈ ಕಾರ್ಯಕರ್ತರು ರೈಲು ತಡೆ ನಡೆಸಿದರು.

 

LEAVE A REPLY