ಭೂಕಬಳಿಕೆ ಮಾಡಿಲ್ಲ : ರೈ

ದಾಖಲೆ ಪತ್ರ ತೆರೆದಿಟ್ಟು

ಹರಿಕೃಷ್ಣ ಆರೋಪಕ್ಕೆ ತಪರಾಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪತ್ನಿ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಮುಖಂಡ, ಹಾಲಿ ಬಿಜೆಪಿಗ ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ದಾಖಲೆಪತ್ರಗಳ ಸಮೇತ ಉತ್ತರವನ್ನು ಮಾಧ್ಯಮದ ಮುಂದಿಟ್ಟಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತನ್ನ ವಿರುದ್ಧ ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪಗಳನ್ನು ಸಾರಾಸಗಾಟಾಗಿ ತಳ್ಳಿ ಹಾಕಿದರು.

“ನಾನು ಸಾಮಾಜಿಕ ಬದುಕಿನಲ್ಲಿ ಶಾಸಕನಾಗಿ, ಸಚಿವನಾಗಿ ಜನ ಸೇವೆ ಮಾಡುತ್ತಿದ್ದೇನೆ. ನಾನು ನಿದ್ದೆಗೆಟ್ಟಿದ್ದರೆ ಅದು ಜನರಿಗಾಗಿ, ಸ್ವಂತಕ್ಕಾಗಿ ಅಲ್ಲ. ನನಗೆ ಯಾವುದೇ ದುರಭ್ಯಾಸ ಇಲ್ಲ. ಮಾಂಸ ತಿನ್ನುವುದಿಲ್ಲ, ಸಂತೋಷ ಕೂಟದಲ್ಲಿ ಭಾಗವಹಿಸುವುದಿಲ್ಲ. ಇಂದು ನಾನು ಮಾಧ್ಯಮದ ಮುಂದೆ ಹಾಜರಾಗಿರುವುದು ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸಲು ಅಲ್ಲ, ವಾಸ್ತವ ಸ್ಥಿತಿಯನ್ನು ಜನರ ಮುಂದಿಡಲು. ಯಾವುದೇ ಜಮೀನನ್ನು ಅಪೇಕ್ಷೆ ಮಾಡುವ ವ್ಯಕ್ತಿ ನಾನಲ್ಲ. ನನಗೆ ಬೆಂಗಳೂರು ಅಥವಾ ಮಂಗಳೂರಿನಲ್ಲಿ ಮನೆ ಇಲ್ಲ. ನಮ್ಮದು ನೂರಾರು ಎಕರೆ ಜಮೀನನ್ನು ಬಡಬಗ್ಗರಿಗೆ ದಾನ ನೀಡಿದ ವಂಶ” ಎಂದರು.

“ಕುಟುಂಬದಿಂದ ಬಂದ ಒಟ್ಟು 15.22 ಎಕರೆ ಜಮೀನು ಕಳ್ಳಿಗೆಯಲ್ಲಿದೆ. ನನ್ನ ತಂದೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದು, ಅದರಲ್ಲಿಯೂ ಹಲವು ಎಕರೆ ಭೂಮಿಯನ್ನು ಭೂ ಸುಧಾರಣೆ ಕಾಯ್ದೆ ಸಂದರ್ಭ ಒಕ್ಕಲುದಾರರಿಗೆ ನಾವೇ ಕೊಟ್ಟಿದ್ದೇವೆ. ಉಳಿದ ಜಮೀನಿನಲ್ಲಿ ಐದು ಮಕ್ಕಳು ವಿಭಾಗ ಪತ್ರ ಮಾಡಿದ್ದು, ಆ ವಿಭಾಗ ಪತ್ರದ ಮೂಲಕ ಅಣ್ಣ ಹಾಗೂ ನಾನು ಭಾಗ ಮಾಡಿಕೊಂಡಿದ್ದೇವೆ. ಕುಟುಂಬದ ಸದಸ್ಯರ ಕೆಲವು ಆಸ್ತಿಯನ್ನು ಕ್ರಮ ಪತ್ರದ ಮೂಲಕ ನಾನು ಪಡೆದಿದ್ದೇನೆ. ಅದು ಎಲ್ಲ ಸೇರಿ ಒಟ್ಟು 15.22 ಎಕರೆ ಜಮೀನಿದೆ” ಎಂದರು.

“ಕಳ್ಳಿಗೆಯಲ್ಲಿ ಒಕ್ಕಲುದಾರರು ಕೆಲವು ಭೂ ಸುಧಾರಣೆ ಸಂದರ್ಭದಲ್ಲಿ ಸರ್ವೆ ನಂಬರ್ ಬಿಟ್ಟು ಹೋಯಿತು ಎಂದಾಗ ಅದನ್ನು ಅವರಿಗೆ ಬಿಟ್ಟು ಕೊಟ್ಟಿದ್ದೇನೆ. ನನ್ನ ವರ್ಗದ ಜಮೀನಿನಲ್ಲಿ ಎಂಟು ಎಕರೆ ರಬ್ಬರ್ ಇದೆ. ಬೋರ್ವೆಲ್ ನಮ್ಮ ವರ್ಗದ ಜಮೀನಿನಲ್ಲಿದೆ. ಅದರಲ್ಲಿ

ಸ್ವೀಟ್ ಬಾಕ್ಸಿನಲ್ಲಿ

ನೋಟಿನ ಕಂತೆ !

“ನಾನು ಈಗಲೂ ಪರಿಶುದ್ಧ ಹಸ್ತ ಹೊಂದಿದ್ದೇನೆ. ಇದುವರೆಗಿನ ರಾಜಕೀಯ ಜೀವನದಲ್ಲಿ ಯಾರಲ್ಲೂ ಒಂದು ಪೈಸೆ ಪಡೆದುಕೊಂಡಿಲ್ಲ” ಎಂದು ಸಚಿವ ರೈ ಹೇಳಿದರು. “ನಾನು ಅಬಕಾರಿ ಸಚಿವನಾಗಿದ್ದಾಗ ವೈನ್ ಮೆರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದ ಎ ಸದಾನಂದ ಶೆಟ್ಟಿಯವರು ನನ್ನನ್ನು ಸನ್ಮಾನಿಸಿ ಒಂದು ಕಟ್ಟು ನೀಡಿದರು. ನಾನು ಸಿಹಿ ತಿಂಡಿ ಇರಬಹುದೆಂದುಕೊಂಡಿದ್ದೆ. ಆದರೆ ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ನೋಟಿನ ಕಂತೆಗಳಿದ್ದವು. ನಾನು ಅದನ್ನು ಅವರಿಗೆ ವಾಪಸು ಮರಳಿಸಿದ್ದೇನೆ. ಬೇಕಿದ್ದರೆ ಸದಾನಂದ ಶೆಟ್ಟಿಯವರನ್ನು ಕೇಳಬಹುದು. ಅವರು ಇಲ್ಲ ಎಂದು ಹೇಳಿದರೆ ರಾಜಕೀಯ ಬಿಡುತ್ತೇನೆ. ಸಾರಿಗೆ ಸಚಿವನಾಗಿದ್ದಾಗ ಸೂಟ್ಕೇಸ್ ತೆಗೆದುಕೊಂಡಿಲ್ಲ. ಅರಣ್ಯ ಸಚಿವನಾಗಿ ವರ್ಗಾವಣೆಯಲ್ಲಿ ಹಣ ಮಾಡಿಲ್ಲ” ಎಂದು ರೈ ಹೇಳಿದರು.