ಅಪಪ್ರಚಾರ ಮಾಡಿದವರಿಗೆ ದೇವರು ಬುದ್ಧಿ ಕೊಡಲಿ : ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದೀಪಕ್ ಹತ್ಯೆಯ ಆರೋಪವನ್ನು ನಳಿನ್ ನನ್ನ ಮೇಲೆ ಹಾಕಿದ್ದರು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರು ಬುದ್ಧಿ ಕೊಡಲಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಗೃಹ ಸಚಿವರನ್ನು ಮಾತನಾಡಿಸುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ನೋವಿನಿಂದ ಒಂದೆರಡು ಮಾತುಗಳನ್ನು ಆಡಿದರು.

“ಸುರತ್ಕಲ್ ಸಮೀಪದ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ವಿಚಾರದಲ್ಲಿ  ನನ್ನ ಪಾತ್ರವಿದೆಯೆಂದು ಸಂಸದ ನಳಿನ್ ಕುಮಾರ್ ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಪಾತ್ರ ಇದೆ ಅಂತ ನಾನು ಹೇಳುವುದಿಲ್ಲ, ಹೀಗಂತ ಕೆಟ್ಟ ಹೇಳಿಕೆಯನ್ನು ಕೂಡ ನಾನು ನೀಡುವುದಿಲ್ಲ.  ದೀಪಕ್ ಹತ್ಯೆ ಪ್ರಕರಣದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಅವರು ಬಿಜೆಪಿ ಕಾರ್ಪೊರೇಟರ್ ತಿಲಕ್ ರಾಜ್ ಅವರ ಕೈವಾಡ ಇರಬಹುದು ಎನ್ನುವ ಆಪಾದನೆ ಮಾಡಿದಾಗ ನಳಿನ್ ಕುಮಾರ್ ಕಟೀಲು ಅವರಿಗೆ ನೋವಾಗಿದೆಯಂತೆ.  ಹಾಗಾದ್ರೆ ಅವರು ನನ್ನ ವಿರುದ್ಧ ನೀಡಿರುವ ಹೇಳಿಕೆಯಿಂದ ನನಗೆ, ನನ್ನ ಕುಟುಂಬದವರಿಗೆ ನೋವಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

“ಇಲ್ಲಿ ನಡೆದ ಎಲ್ಲಾ ಕೊಲೆಗಳಿಗೆ ನನ್ನ ಹೆಸರನ್ನು ಹೇಳುತ್ತಾ ಬಂದಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

LEAVE A REPLY