ಪರಮೇಶ್ವರಗೆ ರಾಹುಲ್ ಬುಲಾವ್

ಬೆಂಗಳೂರು : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರರನ್ನು ಇಂದು ದಿಲ್ಲಿಗೆ ಮಾತುಕತೆಗಾಗಿ ಆಹ್ವಾನಿಸಿದ್ದು, ಇಬ್ಬರು ಪಕ್ಷ ನಾಯಕತ್ವ ಬದಲಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡೀಕೇಶಿ, ಎಂ ಬಿ ಪಾಟೀಲ್ ಮತ್ತು ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೆಸರು ಕೇಳಿ ಬರುತ್ತಿದ್ದು, ಕೆಪಿಸಿಸಿ ಹುದ್ದೆಗೆ ಇವರಲ್ಲಿ ಒಬ್ಬರ ಆಯ್ಕೆ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.