ರಾಹುಲ್ ಮುಂದಿನ ಪ್ರಧಾನಿ : ಅಯ್ಯರ್

ಮೂಡಬಿದ್ರೆ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಐಯ್ಯರ್ ರಾಹುಲ್ ಪರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಾತನಾಡುತ್ತಿದ್ದ ಅಯ್ಯರ್, “ನೆಹ್ರೂರವರು ಭಾರತವನ್ನು ಎಲ್ಲ ಧರ್ಮದವರಿಗೂ ಸಮಾನ ಹಕ್ಕುಗಳೊಂದಿಗೆ ಜಾತ್ಯತೀತ ರಾಷ್ಟ್ರವನ್ನಾಗಿಸಲು ಸತತ ಪ್ರಯತ್ನ ನಡೆಸಿದ್ದರು. ಅವರೊಬ್ಬ ಸಮಾಜವಾದಿಯೂ ಆಗಿದ್ದರು. ದೇಶದ ಸ್ವಾತಂತ್ಯೋತ್ಸವ ಹೋರಾಟದಲ್ಲಿ ಅವರೊಬ್ಬ ವಿಶೇಷ ವ್ಯಕ್ತಿಯಾಗಿದ್ದುದಲ್ಲದೆ, ಪ್ರಜಾಪ್ರಭುತ್ವ ದೇಶದ ಶಿಲ್ಪಿಯಾಗಿದ್ದಾರೆ” ಎಂದರು. ಭಾರತದಲ್ಲಿ ವಾಸಿಸುವವನೊಬ್ಬ ಭಾರತೀಯ ಎಂಬುದು ನೆಹ್ರೂ ಕಲ್ಪನೆಯಾಗಿತ್ತು ಎಂದವರು ಹೇಳಿದರು.