ಸಿಪಿಎಂ ಮುಖಂಡ ಯೊಚೂರಿ ಜತೆ ರಾಹುಲ್ ಮಾತುಕತೆ

ನವದೆಹಲಿ :  ಸಂಸತ್ತಿನೊಳಗೆ ಮತ್ತು ಹೊರಗೆ ಬಿಜೆಪಿಯನ್ನು ಮಟ್ಟ ಹಾಕುವ ಉದ್ದೇಶವಿಟ್ಟುಕೊಂಡ `ವಿಸ್ತøತ ಮೈತ್ರಿ’ಯೊಂದನ್ನು ಮುನ್ನಡೆಸುವ ವಿಷಯದಲ್ಲಿ ರಾಹುಲ್ ಗಾಂಧಿ ನಿನ್ನೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯೊಂದಿಗೆ ಮಾತುಕತೆ ನಡೆಸಿದರು. ಜಿಎಸ್‍ಟಿ ಮಸೂದೆ, ಇವಿಎಂಎಸ್ ವಿವಾದ, ಅಲ್ವಾರದಲ್ಲಿ ಗೋರಕ್ಷಕರಿಂದ ಮುಗ್ಧ ಜನರ ಮೇಲೆ ಹಲ್ಲೆ ಇವೇ ಮೊದಲಾದ ವಿಷಯಗಳ ಬಗ್ಗೆ ಒಗ್ಗೂಡಿ ಹೋರಾಟ ನಡೆಸುವ ಕುರಿತಾಗಿ ಈ ನಾಯಕರು ಕಾಂಗ್ರೆಸ್ ಸಂಸದೀಯ ಪಕ್ಷ ಕಚೇರಿಯಲ್ಲಿ ಸುಮಾರು ಅರ್ಧ ತಾಸು ಚರ್ಚೆ ನಡೆಸಿದರು.