`ರಾಗಿಣಿ ಎಂಎಂಎಸ್ ರಿಟನ್ರ್ಸ್’ ಸರಣಿಯ ಹಾಟ್ ಪೋಸ್ಟರ್

ಹಲವಾರು ಟೀವಿ ಸೀರಿಯಲ್ ಹಾಗೂ ಕೆಲವಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಏಕ್ತಾ ಕಪೂರ್ ಈಗ ವೆಬ್ ಸೀರೀಸಿಗೂ ಕೈಹಾಕಿದ್ದು ಕೆಲವು ಈಗಾಗಲೇ ಬಿಡುಗಡೆಯಾಗಿವೆ. ಈಗ `ರಾಗಿಣಿ ಎಂಎಂಎಸ್’ ಫ್ರಾಂಚೈಸಿನ ವೆಬ್ ಸರಿಣಿಯೊಂದು ನಿರ್ಮಾಣಗೊಂಡಿದ್ದು ನಿನ್ನೆಯಷ್ಟೇ ಅದರ ಮೊದಲ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ.  ಈ ಸೀರೀಸಿನಲ್ಲಿ ಕರಿಷ್ಮಾ ಶರ್ಮಾ ಹಾಗೂ ಸಿದ್ಧಾರ್ಥ್ ಗುಪ್ತಾ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಪೆÇೀಸ್ಟರಿನಲ್ಲಿ ಕರಿಷ್ಮಾ ಶರ್ಮಾ ಹಾಗೂ ಸಿದ್ಧಾರ್ಥ್ ಗುಪ್ತಾ ಟಾಪ್‍ಲೆಸ್ ಆಗಿದ್ದು ಅವರ ಹಾಟ್ ಸೀನ್ ಪಡ್ಡೆಗಳ ನಿದ್ದೆಗೆಡಿಸುವಂತಿದೆ. ಕರಿಷ್ಮಾ ಈಗಾಗಲೇ ಕೆಲವು ಟೀವಿ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ.

ರಿಯಾ ಸೇನ್ ಕೂಡಾ ಈ ವೆಬ್ ಸರಣಿಯಲ್ಲಿದ್ದಾಳೆ. ಆಕೆ ಕೂಡಾ ಕೆಲವು ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಸೀರೀಸ್ ಇಬ್ಬರು ಹುಡುಗಿಯರ ಕಥೆಯಾಗಿದ್ದು ಇದೊಂದು ಸೆಕ್ಸ್ ಕಮ್ ಹಾರರ್ ಸರಣಿ ಎನ್ನಲಾಗಿದೆ.