ಗೋವಾ ಬೀಚಲ್ಲಿ ರಾಗಿಣಿಯ ಫೊಟೋಶೂಟ್

ದುಂಡು ದುಂಡಗೆ ಇದ್ದ ರಾಗಿಣಿ ದ್ವಿವೇದಿ ಈಗ ಕೆಲವು ಸಮಯಗಳಿಂದ ಕಂಪ್ಲೀಟ್ ತೆಳ್ಳಗಾಗಿ ಹಾಟ್ ಆಂಡ್ ಫಿಟ್ ಆಗಿದ್ದಾಳೆ. ಈಕೆ ಈಗ ಗೋವಾ ಬೀಚಲ್ಲಿ ಮಾಡಿಸಿಕೊಂಡ ಫೊಟೋಶೂಟ್ ವೆಬ್ಬಿನಲ್ಲಿ ವೈರಲ್ ಆಗಿದೆ.

ಗೋವಾದ ಸುಂದರ ಬೀಚಿನಲ್ಲಿ ಬಿಕಿನಿ ತೊಟ್ಟಿದ್ದ ರಾಗಿಣಿ ಕಡಲ ಕಿನಾರೆಯಲ್ಲಿ ಸ್ನೇಹಿತೆ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾಳೆ. ರಾಗಿಣಿ ಗೋವಾಗೆ ಹೋಗಿರುವುದು ಸ್ನೇಹಿತೆಯ ಕಂಪನಿಯ ಜಾಹೀರಾತು ಫೆÇೀಟೋ ಶೂಟಿಗಾಗಿ. ಜಾಹೀರಾತಿನ ಚಿತ್ರೀಕರಣ ಮುಗಿದರೂ ಈ ಗೆಳತಿಯರಿಬ್ಬರೂ ಮತ್ತೂ ಕೆಲವು ಸಮಯ ಗೋವಾದಲ್ಲೇ ಮೋಜು ಮಸ್ತಿಯಲ್ಲಿ ನಿರಿತರಾಗಿದ್ದರು.

ರಾಗಿಣಿ ಸದ್ಯ `ಕಿಚ್ಚು’ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಳೆ. ಜೊತೆಗೇ `ಗಾಂಧಿಗಿರಿ’ ಚಿತ್ರದಲ್ಲೂ ನಟಿಸುತ್ತಿದ್ದಾಳೆ. ಕಳೆದ ತಿಂಗಳು ರಾಗಿಣಿ ನಟಿಸಿದ್ದ `ವೀರ ರಣಚಂಡಿ’ ಬಾಕ್ಸಾಫೀಸಿನಲ್ಲಿ ಹೆಚ್ಚು ಸದ್ದು ಮಾಡಲು ವಿಫಲವಾಗಿತ್ತು.

LEAVE A REPLY