ರಾಘವೇಶ್ವರ ಮಹಾತ್ಮೆ

ಸಂನ್ಯಾಸಾಶ್ರಮ ಸ್ವೀಕಾರ ಮಾಡಿದವರು  ಎಲ್ಲಾ ಸುಖಭೋಗಗಳನ್ನು ತ್ಯಜಿಸಿದವರೆಂದರ್ಥ  ಆದರೆ  ಕಾರು  ವಿಮಾನಗಳಲ್ಲಿ ಸಂಚರಿಸುತ್ತಾ ಸುಗ್ರಾಸಭೋಜನ ಮಾಡುವ ನಗರವಾಸಿ  ದೇಶಸಂಚಾರಿ  ಉದ್ಯಮಿ ಸ್ವಾಮಿಗಳ ಸಂಖ್ಯೆ ಇದೀಗ ಏರುಗತಿಯಲ್ಲಿದೆ
ಸ್ವಾಮಿಗಳು ಬ್ರಹ್ಮಚರ್ಯ ಪಾಲನೆ ಮಾಡುವವರು  ಅದು ಸಾಧ್ಯವಿಲ್ಲದವರು  ಪೀಠತ್ಯಾಗ ಮಾಡಿ ಸಂಸಾರಿಗಳಾದ ಉದಾಹರಣೆಗಳು ಅನೇಕ ಇವೆ  ಈ ಮಧ್ಯೆ ಮಡದಿ ಮಕ್ಕಳನ್ನು ತ್ಯಜಿಸದೆ ಸ್ವಾಮಿಗಳಾದವರೂ ಇದ್ದಾರೆ
ರಾಘವೇಶ್ವರ ಸ್ವಾಮಿಗಳು ಹೇಳಿಕೇಳಿ ಬ್ರಹ್ಮಚಾರಿಗಳು  ಆದರೆ ಇವರ ಮೇಲೆ ಮಹಿಳೆ ಓರ್ವರು ಅತ್ಯಾಚಾರದ ಆರೋಪ ಹೊರಿಸಿದರು. ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ  ಸ್ವಾಮಿಗಳು ಅತ್ಯಾಚಾರ ಮಾಡಿಲ್ಲ ಎಂದು ಹೇಳಿತು  ಹಾಗೆಂದು ಸ್ವಾಮಿಗಳು ಆ ಮಹಿಳೆಯೊಡನೆ ಲೈಂಗಿಕ ಸಂಬಂಧವನ್ನೇ ಹೊಂದಿರಲಿಲ್ಲ ಎಂದು ಹೇಳಿಲ್ಲ  ಬದಲಾಗಿ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಅತ್ಯಾಚಾರವಾಗುವುದಿಲ್ಲ ಎಂಬುದೇ ಅದರ ನ್ಯಾಯತೀರ್ಮಾನದ ಸಾರ  ಎಂಬಲ್ಲಿಗೆ  ಸ್ವಾಮಿಗಳು ಅತ್ಯಾಚಾರ ಮಾಡಿಲ್ಲ ಮಹಿಳೆಯ ಸಮ್ಮತಿಯೊಂದಿಗೆ ಸಂಬಂಧ ಬೆಳೆಸಿದ್ದಾರೆ ಎಂದೇ ಅರ್ಥ  ಇಲ್ಲಿ ಸ್ವಾಮಿಗಳ ಬ್ರಹ್ಮಚರ್ಯ ಭಂಗ ಆಗಿದೆ  ಸ್ತ್ರೀ ಸಂಪರ್ಕವನ್ನು ಅವರು ಹೊಂದಿದ್ದರೆಂಬುದೂ ಸ್ಪಷ್ಟವಾಗಿದೆ ಅಂತಹ ಸ್ವಾಮಿಯನ್ನು ಜನರು ಇನ್ನೂ ಪುರಸ್ಕರಿಸುತ್ತಿರುವುದು ಮಾತ್ರ ಆಶ್ಚರ್ಯಕರ  ಇಂತಹ ಸ್ವಾಮಿಯವರನ್ನು ದೂರುವುದಾಗಲೀ ನಿಂದಿಸುವುದಾಗಲೀ ಬೇಡ  ಕನಿಷ್ಠ ಅವರಿಂದ ದೂರ ಇರಬಹುದಲ್ಲ  ಕೇಸು ರದ್ದಾದರೂ ತೀರ್ಪಿನ ತಾತ್ಪರ್ಯವನ್ನು ಭಕ್ತರು  ಶಿಷ್ಯರು ಗ್ರಹಿಸದೇ ಇರುವುದು ಆಶ್ಚರ್ಯಕರ
ಈ ಹಿಂದೆ ಇತರ ಸ್ವಾಮಿಗಳ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದ ರಾಘವೇಶ್ವರರಿಗೆ ಇತ್ತೀಚೆಗೆ ಅಂತಹ ಅವಕಾಶಗಳು ಕಡಿಮೆ ಆಗಿವೆ. ಸುಮ್ಮನೆ ಕಳಂಕಿತರ ಸಮೀಪ ಇದ್ದು ಹೆಸರು ಹಾಳು ಮಾಡಿಕೊಳ್ಳುವುದು ಬೇಡವೆಂದು ಇತರರು ಜಾಗರೂಕರಾಗಿರಬಹುದು. ಆದರೆ ಆ ಎಚ್ಚರ ಜನಸಾಮಾನ್ಯರನೇಕರಿಗೆ ಇನ್ನೂ ಬಂದಿಲ್ಲದಿರುವುದು ಆಶ್ಚರ್ಯಕರ

  • ಮುಕೇಶ್ ಎಂ  ಮಂಗಳೂರು