`ರಯೀಸ್’ ಟ್ರೈಲರ್ ವೈರಲ್

ಕಿಂಗ್ ಖಾನ್ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸಿರುವ `ರಯೀಸ್’ ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು ಅದೀಗ ಸಕತ್ ವೈರಲ್ ಆಗಿದೆ. ಯುಟ್ಯೂಬಿಗೆ ಟ್ರೈಲರ್ ಬಂದ ಕೆಲ ನಿಮಿಷಗಳಲ್ಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಶಾರೂಕ್ ಖಾನ್ ವಿಭಿನ್ನ ಲುಕ್ ಜೊತೆಗೇ ಖಡಕ್ ಡೈಲಾಗ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮಿಂಚಿದ್ದಾರೆ. ಪಾಕಿಸ್ತಾನೀ ಬೆಡಗಿ ಮಹೀರಾ ಖಾನ್ ಶಾರೂಕ್ ಜೊತೆ ರೊಮ್ಯಾನ್ಸ್ ಮಾಡಿದ್ದರೆ ಸನ್ನಿ ಲಿಯೋನ್ ಐಟಂ ಹಾಡಿಗೆ ಸೊಂಟ ಬಳುಕಿಸಿ ಚಿತ್ರಕ್ಕೆ ಗ್ಲಾಮರ್ ಟಚ್ ನೀಡಿದ್ದಾಳೆ.
ಗುಜರಾತಿನ ಮದ್ಯ ಉದ್ಯಮ ಪ್ರಪಂಚದತ್ತ ಬೆಳಕು ಚೆಲ್ಲುವ ಕಥೆ ಹೊಂದಿರುವ ಈ ಚಿತ್ರವನ್ನು ರಾಹುಲ್ ದೊಲ್ಹಾಕಿಯಾ ನಿರ್ದೇಶಿಸಿದ್ದಾರೆ. “ಗುಜರಾತಿನ ಗಾಳಿಯಲ್ಲೇ ವ್ಯಾಪಾರವಿದೆ. ನನ್ನ ಉಸಿರು ನಿಲ್ಲಿಸಬಹುದು ಆದರೆ, ಇಲ್ಲಿನ ಹವೆ ನಿಲ್ಲಿಸಲಾಗದು” ಎನ್ನುವ ಶಾರೂಕ್ ಡಯಲಾಗ್ ಇದು ಒಂದು ರೀತಿಯಲ್ಲಿ ಚಿತ್ರದ ಟ್ಯಾಗ್ಲೈನ್ ಎಂದೇ ಹೇಳಬಹುದು.