ಶಾರೂಖ್ `ರಯೀಸ್’ ಪ್ರಚಾರ : ರೈಲು ನಿಲ್ದಾಣದಲ್ಲಿ ಕಾಳ್ತುಳಿತಕ್ಕೆ ಒಬ್ಬರು ಮೃತ

ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ತಮ್ಮ ತಂಡದೊಂದಿಗೆ ವಡೋದರ ರೈಲು ನಿಲ್ದಾಣದಲ್ಲಿ ತನ್ನ `ರಯೀಸ್’ ಚಿತ್ರದ ಪ್ರಚಾರಕ್ಕೆಂದು ಬಂದಿದ್ದಾಗ ಉಂಟಾದ ಅಭಿಮಾನಿಗಳ ನೂಕುನುಗ್ಗಲಿನ ವೇಳೆ ಕಾಲ್ತುಳಿತಕ್ಕೆ ಒಬ್ಬರು ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಆಗಸ್ಟ್ ಕ್ರಾಂತಿ ಎಕ್ಸಪ್ರೆಸ್ಸಿನಲ್ಲಿ ಶಾರೂಖ್ ಮತ್ತು ಅವರ ತಂಡ ಸದ್ರಿ ರೈಲು ನಿಲ್ದಾಣಕ್ಕೆ ಆಗಮಿಸಿತ್ತು. ಜನಸಾಗರವನ್ನು ಕಂಡ ಶಾರೂಖ್ ರೈಲಿನಿಂದ ಇಳಿಯಲು ನಿರಾಕರಿಸಿ, ಧ್ವನಿವರ್ಧಕದ ಮೂಲಕ `ರಯೀಸ್’ ಚಿತ್ರ ನಾಳೆ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದರು. ನಂತರ ಕಲಾವಿದ ತಂಡ ರೈಲಿನಲ್ಲಿ ತೆರಳಿದ್ದು, ತಕ್ಷಣ ಅಭಿಮಾನಿಗಳು ರೈಲಿಗೆ ಮುಗಿಬಿದ್ದಿದ್ದಾರೆ. ಆಗ ದುರಂತ ಸಂಭವಿಸಿದೆ.