ಲಂಕಾ ಚರ್ಚ್ ಧ್ವಂಸಗೈದ ಉಗ್ರ ಬೌದ್ಧರಿಗೆ ಜಾಮೀನು

ಚರ್ಚ್ ಧ್ವಂಸ ಖಂಡಿಸಿ ಪ್ರತಿಭಟಿಸಿದ ಶ್ರೀಲಂಕಾ ಕ್ರೈಸ್ತರು

ಕೊಲಂಬೊ : ವಾಯುವ್ಯ ಶ್ರೀಲಂಕಾದ ಪಹರೈಯ್ಯ ಎಂಬಲ್ಲಿನ ಕ್ರೈಸ್ತ ಪ್ರಾರ್ಥನಾಲಯ – ಕಿತ್ತು ಸೇವನ (ಹೌಸ್ ಆಫ್ ಕ್ರೈಸ್ಟ್) ಮೇಲೆ ಬೌದ್ಧ ಭಿಕ್ಷುವೊಬ್ಬನ ನೇತೃತ್ವದಲ್ಲಿ 12 ಮಂದಿ ತೀವ್ರಗಾಮಿ ಬೌದ್ಧ ಧರ್ಮೀಯರು ದಾಳಿ ನಡೆಸಿ ನಾಶಗೊಳಿಸಿದ್ದರೆ, ಆರೋಪಿಗಳೆಲ್ಲರೂ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪೊಲೀಸ್ ದೂರು ದಾಖಲಿಸಿ ಸುಮಾರು 200 ಪ್ರತ್ಯಕ್ಷದರ್ಶಿಗಳು ಆರೋಪಿ ಬೌದ್ಧ ಭಿಕ್ಷು ಮತ್ತು ಇತರ 12 ದಾಳಿಕೋರರನ್ನು ಹೆಸರಿಸಿದ ಹೊರತಾಗಿಯೂ ಅವರಿಗೆ ಜಾಮೀನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಪ್ರಾರ್ಥನಾಲಯವನ್ನು ಸ್ಥಳೀಯ 15ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ 20 ಮಂದಿ ಇತರ  ಭಕ್ತರೂ  ಉಪಯೋಗಿಸುತ್ತಿದ್ದರು. ಇದೀಗ Àದಾಳಿಯಲ್ಲಿ ಚರ್ಚ್ ನೆಲಸಮಗೊಂಡ ನಂತರ  ಸ್ಥಳೀಯ ಕ್ರೈಸ್ತ ಕುಟುಂಬಗಳು ತಾವು ಮರದಡಿಯಲ್ಲಿಯಾದರೂ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸುವುದಾಗಿ ಹಾಗೂ ಯಾವುದೇ ರೀತಿಯಾಗಿ ಪ್ರತೀಕಾರ ತೀರಿಸುವುದಿಲ್ಲ ಎಂದು ಹೇಳಿವೆ.

ಪಹರಯ್ಯ ಕ್ರೈಸ್ತ ಸಮುದಾಯಕ್ಕೆ ಸಹಾಯಕ್ಕೆ ನಿಂತಿರುವ ಧರ್ಮಗುರು ರಂಜನ್ ಪಲಿತ ಹೇಳುವಂತೆ ಚರ್ಚಿಗೆ ಈ ಹಿಂದೆಯೂ ಬೆದರಿಕೆಗಳು ಬಂದಿವೆಯಾದರೂ ಇಂತಹ ದಾಳಿ ನಡೆದಿರುವುದು ಇದೇ ಮೊದಲು.