ರಾಧಿಕಾ -ನಿರೂಪ್ ಚಿತ್ರಕ್ಕೆ ಇಂದು ಮುಹೂರ್ತ

ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾಳೆ. ಆಕೆ `ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಜೊತೆ ಮೊದಲ ಬಾರಿಗೆ ತೆರಹಂಚಿಕೊಳ್ಳಲಿದ್ದು ಇಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾಗೆ ನಿರ್ದೇಶಕ ಮಣಿರತ್ನಂ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ವಿ.ಪ್ರಿಯಾ ಎನ್ನುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಕಾಮಿಡಿ ರೊಮ್ಯಾನ್ಸ್ ಎಲ್ಲವೂ ಇದೆಯಂತೆ.

ಅಂದ ಹಾಗೆ ರಾಧಿಕಾಗೆ ಈಗ ಡಬಲ್ ಧಮಾಕಾ. ಒಂದೆಡೆ ಯಶ್ ಮತ್ತು ರಾಧಿಕಾ ಡಿಸೆಂಬರ್ 10ರಂದು  ಮದುವೆಯಾಗಿ ಒಂದು ವರ್ಷವಾಗಿದ್ದು ಆ ಸಂಭ್ರಮಾಚರಣೆಯ ಜೊತೆಗೆ ಮತ್ತೆ ಕ್ಯಾಮರಾ ಎದುರಿಸುವ ಎಕ್ಸೈಟಿನಲ್ಲಿದ್ದಾಳೆ ರಾಧಿಕಾ.

ನಿರೂಪ್ ಭಂಡಾರಿ ಈಗ `ರಾಜರಥ’ ಚಿತ್ರದ ಶೂಟಿಂಗ್ ಮುಗಿಸಿದ್ದು ಡಿಸೆಂಬರ್ 11ರಿಂದ ರಾಧಿಕಾ ಜೊತೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾನೆ ಎನ್ನಲಾಗಿದೆ.