ಹಾರರ್ ಚಿತ್ರದಲ್ಲಿ ರಾಧಿಕಾ

ರಾಧಿಕಾ ಕುಮಾರಸ್ವಾಮಿ `ಸ್ವೀಟಿ’ ಹಾಗೂ `ರುದ್ರತಾಂಡವ’ ಚಿತ್ರಗಳ ನಂತರ ತೆರೆಯ ಮೇಲೆ ಬಂದಿರಲಿಲ್ಲ. ಹಾಗಂತ ಆಕೆಯೇನೂ ಸುಮ್ಮನೇ ಕುಳಿತಿಲ್ಲ. ಕೆಲವು ಚಿತ್ರಗಳಲ್ಲಿ ಆಕೆ ಈಗ ನಟಿಸುತ್ತಿದ್ದಾಳೆ. ಸದ್ಯ ರವಿಚಂದ್ರನ್ ನಿರ್ದೇಶನದ `ರಾಜೇಂದ್ರ ಪೆÇನ್ನಪ’್ಪ ಸಿನಿಮಾದಲ್ಲಿ ನಟಿಸುತ್ತಿರುವ ರಾಧಿಕಾ ಇದೀಗ ಬಂದ ಸುದ್ದಿಯ ಪ್ರಕಾರ ಹಾರರ್ ಸಿನಿಮಾವೊಂದರಲ್ಲಿ ಆಕೆ ನಟಿಸುವುದು ಪಕ್ಕಾ ಆಗಿದೆ. ಈ ಚಿತ್ರದಲ್ಲಿ ರಾಧಿಕಾ ನಟಿಸುವುದು ಮಾತ್ರವಲ್ಲ, ಸ್ವತಃ ನಿರ್ಮಾಣದ ಜವಾಬ್ದಾರಿಯನ್ನೂ ಹೊರುತ್ತಿದ್ದಾಳೆ. ಈ ಹಾರರ್ ಚಿತ್ರದ ಥೀಮನ್ನು ರಾಧಿಕಾ ಸಹೋದರ ನೀಡಿದ್ದು ಸಿನಿಮಾಗಾಗಿ ಚಿತ್ರಕಥೆ ಹಾಗೂ ಸಂಭಾಷಣೆ ತಯಾರಾಗುತ್ತಿದೆಯಂತೆ.

ಮೊನ್ನೆಯಷ್ಟೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಧಿಕಾಳ ಆಪ್ತವಲಯದಿಂದ ಈ ಸುದ್ದಿ ಹೊರಬಿದ್ದಿದ್ದು ಇಷ್ಟು ದಿನ ಸ್ವೀಟ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಹಾರರ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೇಗೆ ಹೆದರಿಸ್ತಾಳೆ ನೋಡಬೇಕಿದೆ. ಅಂದ ಹಾಗೆ ಈ ಸಿನಿಮಾವಲ್ಲದೇ ಶಿವರಾಜ್ ಕುಮಾರ್ ಜೊತೆ ರಾಧಿಕಾ ಮತ್ತೊಂದು ಸಿನಿಮಾ ಮಾಡಲಿದ್ದು  ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಲಿದ್ದಾರೆ.