ರೇಸ್ 3 : ಮೊದಲ ಹಾಡಿನ ಶೂಟಿಂಗ್ ಕಂಪ್ಲೀಟ್

ಸಲ್ಮಾನ್ ಖಾನ್ ಹಾಗೂ ಜಾಕ್ಲಿನ್ ಫೆರ್ನಾಂಡಿಸ್ `ಕಿಕ್’ ಚಿತ್ರದ ನಂತರ ಮತ್ತೆ ರೇಸ್-3′ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈಗ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಈಗಾಗಲೇ ಸಲ್ಮಾನ್-ಜಾಕ್ಲಿನ್ ಅಭಿನಯದ ಮೊದಲ ಹಾಡಿನ ಶೂಟಿಂಗ್ ಕಂಪ್ಲೀಟ್ ಆಗಿದೆ. ಸ್ವತಃ ಚಿತ್ರದ ನಿರ್ದೇಶಕರೂ ಆಗಿರುವ ರೆಮೋ ಡಿಸೋಜಾರ ಕೊರಿಯೋಗ್ರಾಫಿಯಲ್ಲಿ ಈ ಹಾಡಿನ ಸೀಕ್ವೆನ್ಸ್ ಚಿತ್ರೀಕರಣಗೊಂಡಿದ್ದು ನಿರ್ಮಾಪಕ ರಮೇಶ್ ತೌರಾನಿ ಇದನ್ನು ಸ್ವತಃ ಸಂತಸದಿಂದ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಸಲ್ಮಾನ್-ಕತ್ರೀನಾರಂತೆ ಸಲ್ಮಾನ್-ಜಾಕ್ಲಿನ್ ಜೋಡಿಯೂ ಸಿನಿಪ್ರೇಕ್ಷಕರಿಗೆ ಬಹಳ ಇಷ್ಟವಾದ ಜೋಡಿ. `ಕಿಕ್’ ಚಿತ್ರದಲ್ಲಿಯ ಅವರ ಕೆಮೆಸ್ಟ್ರಿ ಅದ್ಭುತವಾಗಿ ಮೂಡಿಬಂದಿತ್ತು. ಹಾಗಾಗಿ `ರೇಸ್ 3’ಯಲ್ಲಿ ಅವರ ಡ್ಯೂಯೆಟ್ ನೋಡಲು ಚಿತ್ರಪ್ರೇಮಿಗಳು ಕಾತರದಿಂದ ಕಾದಿದ್ದಾರೆ.  ಈ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬ್ಬಿ ಡಿಯೋಲ್, ಡೈಸಿ ಶಾ, ಪೂಜಾ ಹೆಗ್ಡೆ ಮೊದಲಾದವರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

LEAVE A REPLY