ಜಾಮೀನಾದರೂ ಇಲ್ಲ ಖುರೇಷಿಗೆ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಲೆಯತ್ನ ಆರೋಪದಲ್ಲಿ ಬಂಧಿತನಾಗಿರುವ ಅಹ್ಮದ್ ಖುರೇಷಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದರೂ, ಹಿಂದಿನ ಇನ್ನೊಂದು ಪ್ರಕರಣದಲ್ಲಿ ಬಾಡಿ ವಾರಂಟ್ ಇರುವ ಕಾರಣ ಖುರೇಷಿ ಬುಧವಾರ ಜೈಲಿನಿಂದ ಬಿಡುಗಡೆ ಆಗಿಲ್ಲ. ಪ್ರಕಾಶ್ ಪೂಜಾರಿ ಹತ್ಯೆ

ಯತ್ನ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಖುರೇಷಿಗೆ ಕಳೆದ ಮೇ 5ರಂದು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಮಂಗಳವಾರದಂದು ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಂಡು, ಜೈಲು ಅಧಿಕಾರಿಗಳಿಗೆ ಆತನನ್ನು ಬಿಡುಗಡೆಮಾಡಲು ಆದೇಶವನ್ನೂ ನೀಡಲಾಗಿತ್ತು. ಮೇ 10ರಂದು ಖುರೇಷಿ ಜೈಲಿನಿಂದ ಬಿಡುಗಡೆಯೂ ಆಗಬೇಕಾಗಿತ್ತು.

ಸುರತ್ಕಲ್ಲಿನಲ್ಲಿ ನಡೆದ 2015ರ ಸಾಲಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸÀರು ಬಾಡಿ ವಾರಂಟ್ ಕೇಳಿದ್ದರಿಂದ ಅಹ್ಮದ್ ಖುರೇಷಿ ಮತ್ತೆ ಜೈಲಿನಲ್ಲೇ ಕಳೆಯುವಂತಾಗಿದೆ.