ಸಿಸಿಬಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಖುರೇಷಿ ಸಹೋದರ ಆಗ್ರಹ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಾಧ್ಯಮಗಳಲ್ಲಿ ಸಹೋದರನ ಬಗ್ಗೆ ಬಂದಿರುವ ವರದಿಗಳನ್ನು ಕಂಡು ನಮಗೆ ಆಘಾತವಾಗಿದೆ. ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿರುವ ಕೊಲೆಯತ್ನ ಆರೋಪಿ ಅಹ್ಮದ್ ಖುರೇಷಿಯ ಸಹೋದರ ನಿಷಾದ್ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಅಹ್ಮದ್ ಖುರೇಷಿಯನ್ನು ಆರು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿಕೊಂಡು ದೌರ್ಜನ್ಯ ನಡೆಸಿ ಎರಡೂ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಸಿಸಿಬಿ ಪೊಲೀಸ್ ನಿರೀಕ್ಷಕ ಸುನೀಲ್ ನಾಯ್ಕ್, ಎ ಎಸ್ ಐ ಸುಂದರ್ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಿ’  ಎಂದು ಒತ್ತಾಯಿಸಿದರು.

“ನನ್ನ ತಮ್ಮನಿಗೆ ಯಾವುದೇ ಅಪಘಾತವಾಗಿರಲಿಲ್ಲ. ಇದೊಂದು ಕಟ್ಟುಕತೆ. ಸಹೋದರಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ. ಅಣ್ಣನಿಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು. ಖುರೇಷಿಗೆ ಜೀವನಾಧಾರಕ್ಕಾಗಿ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು. ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಬೇಕು ‘ ‘ಎಂದು ಒತ್ತಾಯಿಸಿದರು. ಮಾ 25ರಂದು ಅಪಘಾತವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಸಿಸಿಬಿ ಪೊಲೀಸರು ಖುರೈಷಿಯನ್ನು ಮಾ 21ರಂದೇ ವಶಕ್ಕೆ ಪಡೆದಿದ್ದರು. ಇನ್ನು ಅಪಘಾತವಾಗಿದ್ದರೂ ಕಿಡ್ನಿ ವೈಫಲ್ಯವಾಗುವ ಸಾಧ್ಯತೆ ಇಲ್ಲ. ಕಿಡ್ನಿ ವೈಫಲ್ಯದ ವೈದ್ಯಕೀಯ ವರದಿ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವರದಿಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದರು.