ಶಿರಸಿಯಲ್ಲಿ ವಿಚಿತ್ರ ಕರು ಜನನ, ಸಾವು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಕುಪ್ಪಗಡ್ಡೆ ಬಳಿ 2 ತಲೆ, 4 ಕಣ್ಣು, 3 ಕಿವಿ ಇರುವ ಕರು ಸೋಮವಾರ ಜನನವಾಗಿದ್ದು, ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ.

ಬಂಗಾರಪ್ಪ ಕುಪ್ಪಗಡ್ಡೆ ಎಂಬವರ ಮನೆಯ ಆಕಳು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ನಂತರ ಕರು ಮೃತಪಟ್ಟಿದೆ. ವೈದ್ಯರು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, “ಇದು ಅವಳಿ ಕರುಗಳ ಬೆಳವಣಿಗೆಯಾಗಿ ಬಳಿಕ ಅಂತಿಮ ಸ್ವರೂಪ ಪಡೆಯದೇ ಈ ರೀತಿಯಾಗಿ ಹುಟ್ಟಿತು. ಇಂತಹ ಕರುಗಳು ಬದುಕುವುದು ಕಷ್ಟ” ಎಂದು ತಿಳಿಸಿದರು.