ಉರಗಪ್ರೇಮಿಯಿಂದ ಹೆಬ್ಬಾವು ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಬಜಾಲ್ ಎಂಬಲ್ಲಿ ಹಗ್ಗ ಸಮೇತ ಹುಂಜವನ್ನು ನುಂಗಿದ್ದ ಹೆಬ್ಬಾವನ್ನು ಉರಗಪ್ರೇಮಿ ಪಾಪು ರಕ್ಷಿಸಿದ್ದಾರೆ.

ಬಜಾಲ್ ಮನೆಯೊಂದರ ಕೋಳಿಗೂಡಿಗೆ ನುಗ್ಗಿದ ಹೆಬ್ಬಾವು ದೊಡ್ಡ ಗಾತ್ರದ ಹುಂಜವೊಂದನ್ನು ನುಂಗಿತ್ತು. ಕಾಲಿಗೆ ಹಗ್ಗ ಸಮೇತ ಈ ಹುಂಜವನ್ನು ಕಟ್ಟಿ ಹಾಕಲಾಗಿತ್ತು. ಆದರೆ ಹಗ್ಗ ಸಮೇತ ಕೋಳಿ ಕೂಡಾ ಹೆಬ್ಬಾವಿನ ಉದರ ಸೇರಿದೆ. ಆದರೆ ಅದನ್ನು ಅರಗಿಸಿಕೊಳ್ಳಲಾಗದೇ ಗೂಡಿನ ಒಳಗೇ ಹೆಬ್ಬಾವು ನರಳಾಟ ಆರಂಭಿಸಿದೆ.

ಬೆಳಿಗ್ಗೆ ಇದನ್ನು ಕಂಡ ಮನೆಮಂದಿ ಕೂಡಲೇ ಉರಗಪ್ರೇಮಿ ಸ್ನೇಕ್ ಪಾಪುಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅವರು, ಹೆಬ್ಬಾವಿನ ಹೊಟ್ಟೆಯಿಂದ ಹುಂಜವನ್ನು ಹೊರತೆಗೆದು ಹೆಬ್ಬಾವನ್ನು ರಕ್ಷಿಸಿದ್ದಾರೆ.