ಬಂಡೀಪುರ ಹುಲಿ ಮೀಸಲುಧಾಮದಲ್ಲಿ ಖಾಸಗಿ ರಿಸಾರ್ಟ್

ಮೈಸೂರು : ಬಂಡೀಪುರ ಹುಲಿ ಮೀಸಲುಧಾಮದ (ಬಿಟಿಆರ್) ಪರಿಸರ ಸೂಕ್ಷ್ಮ ವಲಯವಾದ ಮಂಗಳ ಗ್ರಾಮದಲ್ಲಿ ನಾಲ್ಕು ಎಕ್ರೆ 12 ಗುಂಟೆ ಜಾಗವು ರೆಸಾರ್ಟಾಗಿ ಮಾರ್ಪಡುತ್ತಿದೆ ಎಂದು ವರದಿಯಾಗಿದೆ.
ಕಲ್ಯಾಣಪುರ ಆನೆ ಕಾರಿಡಾರಿಗೆ ಸಮೀಪದ ಬಿಟಿಆರ್ ಅರಣ್ಯ ಸಂರಕ್ಷಣಾಧಿಕಾರಿಯ ಕಚೇರಿಗೆ ನಾಲ್ಕು ಕಿ ಮೀ ಅಂತರದಲ್ಲಿ ಈ ಜಾಗವಿದೆ. ಬಂಡೀಪುರದ ಗುಂಡ್ಲುಪೇಟೆ, ಕಬಿನಿ ಹಾಗೂ ಮೇಕೆದಾಟುವಿನ ಕಾವೇರಿ ಫಿಶ್ಶಿಂಗ್ ಕ್ಯಾಂಪ್ ರಿಸಾರ್ಟ್ ಹೊಂದಿರುವ ಸಾದ್ ಬಿನ್ ಜಂಗ್ಇಲ್ಲಿ ಮತ್ತೊಂದು ರಿಸಾರ್ಟ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.
ನಾವು ತನಿಖೆಗೆ ಹೋಗಿದ್ದಾಗ ಆತ ನಮ್ಮನ್ನೋಡಿಸಿದ್ದಾನೆ. 2011ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ಇ ಎಸ್ ಝಡ್ ಘೋಷಿಸುವ ಮುಂಚೆಯೇ ಅಂದರೆ 2008ರಲ್ಲಿ ತನ್ನ ಜಾಗದಲ್ಲಿ ಕಾಮಗಾರಿ ನಡೆಸಲು ಪರವಾನಿಗೆ ಪಡೆದುಕೊಂಡಿದ್ದೇನೆ ಎಂದು ಜಂಗ್ ಹೇಳಿಕೊಂಡಿದ್ದಾನೆ. ಆದರೆ ಆತನಲ್ಲಿ ಪರವಾನಿಗೆ ಇದ್ದಿದ್ದರೆ ಇಷ್ಟೊಂದು ತಡವಾಗಿ ಯಾಕೆ ನಿರ್ಮಾಣ ಕಾರ್ಯ ಆರಂಭಿಸಿದ್ದಾನೆ ? ಇ ಎಸ್ ಝಡ್ ಘೋಷಣೆಯಾದ ಬಳಿಕ ಹಿಂದಿನ ಆದೇಶಗಳು ರದ್ದಾಗಿವೆ ಎಂದು ಬಿಟಿಆರ್ ಸಿಬ್ಬಂದಿಯೊಬ್ಬರು ಹೇಳಿದರು.
ತೋಟದ ಮನೆ ನಿರ್ಮಿಸಲು ಜಂಗ್ ಸ್ಥಳೀಯ ಡೀಸಿ ಮತ್ತು ಗ್ರಾಮ ಪಂಚಾಯತಿನಿಂದ ಪರವಾನಿಗೆ ಪಡೆದುಕೊಂಡಿದ್ದಾನೆ ಎಂಬುದರ ತನಿಖೆ ಅವಶ್ಯವಾಗಬೇಕು ಎಂದು ಅರಣ್ಯಗಳ ಪ್ರಧಾನ ಸಂರಕ್ಷಣಾಧಿಕಾರಿ ಬಿ ಜೆ ಹೊಸಮಠ ಹೇಳಿದರು. ಸಾಕಷ್ಟು ಅಸ್ಪಷ್ಟತೆ ಇರುವುದರಿಂದ ನಾನು ಆ ಜಾಗದ ವರದಿ ಕೇಳಿದ್ದೇನೆ. ಇದರಲ್ಲಿ ನಮ್ಮ ಇಲಾಖೆಯಲ್ಲದೆ ಸ್ಥಳೀಯ ಆಡಳಿತವೂ ಶಾಮೀಲಾಗಿದೆ ಎಂದರು ಅವರು. ಇಲ್ಲಿ ಯಾವುದೇ ಪ್ರಾಜೆಕ್ಟಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.