ನಾಳೆ ಖಾಸಗಿ ಬಸ್ ಮುಷ್ಕರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿವಿಧ ಬೇಡಿಕೆ ಆಗ್ರಹಿಸಿ ಕೇರಳ ಖಾಸಗಿ ಬಸ್ ಮಾಲಕರ ಸಂಘವು ಜ 24ರಂದು ಮಂಗಳವಾರ ರಾಜ್ಯ ವ್ಯಾಪಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿ ಏಕದಿನ ಸಾಂಕೇತಿಕ ಮುಷ್ಕರ ನಡೆಸಲಿದೆಯೆಂದು ಕಾಸರಗೋಡು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಿರುವ ಖಾಸಗಿ ಬಸ್ಸುಗಳ ಪರವಾನಿಗೆಗಳನ್ನು ಅದೇ ರೀತಿ ಉಳಿಸಬೇಕು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಪ್ರಯಾಣ ದರವನ್ನು ಹೆಚ್ಚಿಸಬೇಕು, ಏರಿಸಿದ ರಸ್ತೆ ಶುಲ್ಕವನ್ನು ಹಿಂತೆಗೆಯಬೇಕು, ಭಾರೀ ಪ್ರಮಾಣದಲ್ಲಿ ಇತ್ತೀಚೆಗೆ ಹೆಚ್ಚಿಸಿದ ವಿವಿಧ ತರದ ಶುಲ್ಕಗಳನ್ನು ಕೂಡಲೇ ಹಿಂತೆಗೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಬಸ್ ಮುಷ್ಕರಕ್ಕೆ ನಿರ್ಧರಿಸಲಾಗಿದೆ.