ಪುತ್ತೂರಲ್ಲಿ ಸ್ವಚ್ಚ ಭಾರತ ಬ್ಯಾನರಿಗೆ ಹಾನಿ ; ದೂರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರು ನಗರಸಭೆ ವತಿಯಿಂದ ಸ್ವಚ್ಚತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ವಿನಂತಿಸುವ ಬ್ಯಾನರ್ ಅಲ್ಲಲ್ಲಿ ಅಳವಡಿಸಲಾಗಿದ್ದು ನಗರ ವ್ಯಾಪ್ತಿಯ ಬಲ್ನಾಡಿನಲ್ಲಿ ಹಾಕಲಾದ ಬ್ಯಾನರಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ನಗರಸಭಾ ಅಧ್ಯಕ್ಷರ ಊರಿನಲ್ಲೇ ಈ ಘಟನೆ ನಡೆದಿದೆ. ನಗರದಲ್ಲಿ ಕಳೆದ ಒಂದು ವರ್ಷದಿಂದ ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಗರಸಭೆ ಮಾಡುತ್ತಿದೆ. ಈಗಾಗಲೇ ನಗರದಲ್ಲಿ ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವ ಮಂದಿಯ ವಿರುದ್ದ ಕ್ರಮವನ್ನೂ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ನಗರದ ಅಲ್ಲಲ್ಲಿ ಎಚ್ಚರಿಕಾ ಫಲಕವನ್ನು ಹಾಕಲಾಗಿದೆ. ಆದರೆ ಶುಕ್ರವಾರದಂದು ಯಾರೋ ಕಿಡಿಗೇಡಿಗಳು ನಗರಸಭೆಯ ಬ್ಯಾನರನ್ನು ಹರಿದು ಹಾಕಿದ್ದಾರೆ. ಈ ಬಗ್ಗೆ ಅಧ್ಯಕ್ಷೆ ಜಯಂತಿ ಬಲ್ನಾಡು ನಗರ ಪೊಲೀಸರಿಗೆ ದೂರು ನೀಡಿದ್ಧಾರೆ.