ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಅವ್ಯವಸ್ಥೆ

ಟಾಯ್ಲೆಟಲ್ಲಿ ಕಡತ ಪೇರಿಸಿಟ್ಟಿರುವುದು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ನಗರದ ಹೃದಯ ಭಾಗದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯ ಸ್ಥಿತಿ ಶÉೂೀಚನೀಯವಾಗಿದೆ. ತಾಲೂಕಿನನಾದ್ಯಂತ ಇರುವ ಕರಾರು ದಾಖಲಾತಿ, ಮೂಲ ದಾಖಲಾತಿ, ಇವುಗಳ ನೋಂದಾವಣಿ ಜಮೀನು ಪರಾಭಾರೆಯ ಕೋಟಿ ಗಟ್ಟಲೆ ವ್ಯವಹಾರಗಳ ದಾಖಲಾತಿಗಳು ನಡೆಯುವ ಸಬ್ ರಿಜಿಸ್ಟ್ರಾರ್ ಆಫೀಸು 51 ವರ್ಷದಷ್ಟು ಹಳೆಯದಾಗಿದ್ದು, ಇಲ್ಲಿಯ ಕಟ್ಟಡದ ಹಂಚುಗಳಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ನಿಂತಿರುವುದಲ್ಲದೆ, ಕಚೇರಿಯ ಒಳ ಹಾಗೂ ಹೊರಭಾಗದಲ್ಲಿನ ಜನ ಸಂಚಾರವಿಲ್ಲದ ಅಜ್ಞಾತ ಕಾಡುಗಳಲ್ಲಿರುವಂತಿದೆ.

 

ಸಾರ್ವಜನಿಕರಿಗೆ ಒಂದೇ ಶೌಚಾಲಯವಿದ್ದು, ಯಾವುದೇ ಸ್ವಚ್ಛತೆಯ  ವ್ಯವಸ್ಥೆಗಳಿಲ್ಲ. ಶೌಚಾಲಯದ ಬಾಗಿಲು ಸರಿ ಇಲ್ಲ. ದಸ್ತಾವೇಜು ಕಾಗದ ಪತ್ರಗಳು ಹಳೆಯ ಜೆರಾಕ್ಸ್ ಮಿಷನ್ ಇನ್ನಿತರ ಉಪಯೋಗಕ್ಕೆ ಇಲ್ಲದ ವಸ್ತುಗಳನ್ನು ಶೌಚಾಲಯದ ಕೋಣೆಯಲ್ಲೇ ಶೇಖರಣೆಮಾಡಲಾಗಿದೆ. ಆದರೆ ಇಲ್ಲಿಯ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇದೇ ಊರಲ್ಲಿ ಬೆಳೆದು ಬಂದ ಶಾಸಕಿ, ಸಂಸದರಿಗಾಗÀಲೀ ಈ ಕುರಿತು ಚಿಂತಿಸಲು ಸಮಯವಿಲ್ಲ. ಇಲ್ಲಿಯ ಅಧಿಕಾರಿಗಳು ಕಿವುಡರೂ ಕುರುಡರಂತೆ ವರ್ತಿಸಲು ಕಾರಣವೇನು ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಪ್ರಶ್ನಿಸಿದ್ದಾರೆ.

ಪುತ್ತೂರು ತಾಲೂಕಿನ ಎಲ್ಲಾ ಗಣ್ಯ ಮತ್ತು ಜನ ಸಾಮಾನ್ಯg ಕಡತಗಳು ನೋಂದಣಿಗೊಳ್ಳುತ್ತಿರುವುದು ಇದೇ ಕಚೇರಿಯಲ್ಲೇ. ಇಲ್ಲಿ ಸಾರ್ವಜನಿಕರು ಮೂಗುಮುಚ್ಚಿಕೊಂಡೇ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಸರಕಾರ ತಕ್ಷಣ ಇಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ.