ಪುತ್ತೂರು ಸರಕಾರಿ ಆಸ್ಪತ್ರೆ ಈಗ ಸೂಪರ್

ಸದಾ ಸುದ್ದಿಯಲ್ಲಿದ್ದ ಪುತ್ತೂರಿನ ಸರಕಾರಿ ಆಸ್ಪತ್ರೆ ಈಗ ಹೊಸ ಕಾಯಕಲ್ಪ ಪಡೆದು ನುರಿತ  ತಜ್ಞ ವೈದ್ಯರಿಂದ ಕೂಡಿದೆ  ಇಲ್ಲಿ ಈಗ ಉತ್ತಮ ಎಲ್ಲ ವಿಭಾಗದಲ್ಲಿ ನುರಿತ ವೈದ್ಯರಿದ್ದಾರೆ  ಸುಮ್ಮನೆ ದುಪ್ಪಟ್ಟು ಹಣ ವಸೂಲು ಮಾಡುವ ಖಾಸಗಿ ಆಸ್ಪತ್ರೆಗಿಂತ ಚೆನ್ನಾಗಿದೆ  ಇನ್ನು ಹಲವು ಡಾಕ್ಟರ್ ಬಂದರೆ ಇನ್ನೂ ಉತ್ತಮ  ಇತ್ತೀಚೆಗೆ ನಗರಸಭಾ ಸದಸ್ಯರೊಬ್ಬರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ವರದಿಯಾಗಿತ್ತು. ಸರಕಾರಿ ನೌಕರರು ಕೂಡಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಆದೇಶ ಹೊರಡಿಸಬೇಕು ಮಂತ್ರಿಗಳಿಗೂ ಕೂಡಾ ಆದೇಶ ಹೊರಡಿಸಬೇಕು  ಸರಕಾರಿ ಆಸ್ಪತ್ರೆಯೆಂದು ಮೂಗು ಮುರಿಯುವವರಿಗೂ ಇದು ಸಂಜೀವಿನಿ

  • ಮುರಾರಿ ಪುತ್ತೂರು