ಹಿಂದೂ ಸಮಾಜೋತ್ಸವಗಳು ನಡೆಸುವ ಉದ್ದೇಶ ಹಿಂದುಳಿದ ವರ್ಗದ ಯುವಕರ ಮನ ಪರಿವರ್ತನೆ

ನಮ್ಮ ದೇಶಕ್ಕೆ ಮಿಷನರಿ ಕ್ರಿಶ್ಚಿಯನ್ನರ ಕೊಡುಗೆ ಅಪಾರ ಅವರ ಕೊಡುಗೆಯ ಫಲವೇ ಹಿಂದುಳಿದ ವರ್ಗ ಸಮಾಜದಲ್ಲಿ ತಲೆಯೆತ್ತಿ ತಿರುಗುವಂತಾಗಿದೆ ವಿದ್ಯಾವಂತರಾಗಿ ಸಮಾಜದಲ್ಲಿ ಮೇಲ್ವರ್ಗದ ದಬ್ಬಾಳಿಕೆಯಿಂದ ಮುಕ್ತಿ ದೊರೆಯಿತು ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಮೇಲ್ವರ್ಗದ ದಬ್ಬಾಳಿಕೆಯಿಂದ ಮುಕ್ತಿ ಪಡೆಯಲು ಸಂಘಟಿತರಾಗಿ ವಿದ್ಯವಂತರಾಗಿರಿ ಎಂದು ಕರೆ ನೀಡಿದ್ದರು ಆದರೆ ಇಂದು ಅದು ಕೋಮು ಸಂಘಟನೆ ಬೆಂಬಲವಾಗಿ ಇರುವ ಮೇಲ್ವರ್ಗದೊಂದಿಗೆ ವೇದಿಕೆ ಹಂಚಿಕೊಂಡು ಬ್ರಹ್ಮಶ್ರೀ ನಾರಾಯಣ ಸ್ವಾಮಿಗಳ ತತ್ವಕ್ಕೆ ವಿರುದ್ಧವಾಗಿ ಹೋಗುತ್ತಿದೆ ಇದನ್ನು ಯುವಕರು ಹಿರಿಯರಿಂದ ಅನುಭವ ಪಡೆದುಕೊಂಡು ಮುಂದುವರಿಯಬೇಕು ಮಠ ದೇವಸ್ಥಾನ ಸರಕಾರ ಸ್ವಾಧೀನ ಪಡಿಸಬೇಕು ಆಗ ಮಾತ್ರ ಸಮಾನತೆ ಬರಲು ಸಾಧ್ಯ ಅಲ್ಪಸಂಖ್ಯಾತರಲ್ಲಿ ನೂರಾರು ಜಾತಿಗಳಿಲ್ಲ ಹಾಗಾಗಿ ಅವರಲ್ಲಿ ಸರಕಾರದ ಹಸ್ತಕ್ಷೇಪ ಅಗತ್ಯ ಇಲ್ಲ ಹಿಂದೂಗಳಲ್ಲಿ ಇದು ಬಹಳ ಅಗತ್ಯ ಇದೆ ಇಲ್ಲವಾದರೆ ಮೇಲ್ವರ್ಗ ಆಡಳಿತ ನಡೆಸುವುದು ಕೆಳವರ್ಗ ಅವಕಾಶ ವಂಚಿತರಾಗುತ್ತಾರೆ ಗುಜರಾತಿನಲ್ಲಿ ಮತ್ತು ದೇಶದ ಇತರ ಕಡೆಗಳಲ್ಲಿ ಮೇಲ್ವರ್ಗದಿಂದ ಕೆಳವರ್ಗದ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಯಾವುದೇ ಹಿಂದೂ ಸಂಘಟನೆಗಳು ಅದರ ಬಗ್ಗೆ ಬಾಯಿ ಬಿಡುವುದಿಲ್ಲ ಹಿಂದೂ ಹೇಳಿದರೆ ಕೋಮುವಾದಿ ಆಗಲಾರ ಇನ್ನೊಂದು ಸಮುದಾಯವನ್ನು ಖಂಡಿಸುವುದು ದ್ವೇಷ ಸಾಧನೆ ಮಾಡುವುದಕ್ಕೆ ಕೋಮುವಾದಿ ಎಂದು ಕರೆಯುತ್ತಾರೆ

  • ಅಂಬಲಪಾಡಿ ಗೋಪಾಲ ಪೂಜಾರಿ  ಉಡುಪಿ