ಪಂಜಾಬ್ ಸರ್ಕಾರದಿಂದ ರೈತರ ಸಾಲ ಮನ್ನಾ

ಚಂಡೀಗಢ : ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಒಟ್ಟು ಸಾಲದಲ್ಲಿ ಎರಡು ಲಕ್ಷ ರೂ ಮನ್ನಾ ಹಾಗೂ ಹೆಚ್ಚು ಸಾಲ ಮಾಡಿರುವ ರೈತರ ಸಾಲಕ್ಕೆ ಎರಡು ಲಕ್ಷ ರೂ ಪರಿಹಾರ ನೀಡಲಾಗುವುದೆಂದು ನಿನ್ನೆ ಪಂಜಾಬ್ ಸೀಎಂ ಅಮರೇಂದರ್ ಸಿಂಗ್ ಪ್ರಕಟಿಸಿದರು. 2017ರ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ರೈತರಿಗೆ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಯಂತೆ ಸೀಎಂ ಸಿಂಗ್ ಈ ಪ್ರಕಟಣೆ ಹೊರಡಿಸಿದರು. ಸರ್ಕಾರದ ಈ ಯೋಜನೆಯಿಂದ 5 ಎಕ್ರೆ ಜಮೀನು ಹೊಂದಿರುವ 8.75 ಲಕ್ಷದ ರೈತರ ಸಹಿತ ರಾಜ್ಯದ ಒಟ್ಟು 10.25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದವರು ಅಸೆಂಬ್ಲಿಯಲ್ಲಿ ತಿಳಿಸಿದರು. ಮತ್ತೊಂದು ವಿಷಯ ಪ್ರಸ್ತಾವಿಸಿ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದಾಗ ಸೀಎಂ ಸಿಂಗ್ ರೈತರ ಸಾಲ ಮನ್ನಾ ಪ್ರಕಟಣೆ ಹೊರಡಿಸಿದ್ದು, ಈ ವೇಳೆ ಮತ್ತೊಂದು ವಿಪಕ್ಷ ಎಎಪಿ ಸದಸ್ಯರು ಹಾಜರಾಗಿದ್ದರು.