ಟ್ರಾಫಿಕ್ ಕೋನ್ ತುಂಡರಿಸಿದ ಚಾಲಕನಿಗೆ ಶಿಕ್ಷೆ ಕೊಡಿ

ಎರಡು ವರ್ಷಗಳ ಹಿಂದೆ ನಗರದ ಕೆಲವು ರಸ್ತೆಗಳಿಗೆ ಅಲ್ಲಲ್ಲಿ ಟ್ರಾಫಿಕ್ ಕೋನುಗಳನ್ನು ಅಳವಡಿಸಲಾಗಿತ್ತು  ಆದರೆ ಕೆಲವು ತಿಂಗಳಲ್ಲೇ ಅವು ತುಂಡಾಗಿ ನೆಲಸಮಗೊಂಡವು  ಇದೆಲ್ಲಾ ಖಾಸಗಿ ಬಸ್ ಚಾಲಕರ ಕಿತಾಪತಿ  ಕೋನುಗಳನ್ನು ಹಾಕಲಾದರೂ ಅವುಗಳನ್ನು ಬೀಳಿಸಿ ಮಜಾ ಉಡಾಯಿಸುವ ಡ್ರೈವರುಗಳು ನಮ್ಮಲ್ಲಿದ್ದಾರೆ ಎಂದರೆ ಅದಕ್ಕೇನೆನ್ನಬೇಕು  ಆವಾಗ ಅಷ್ಟರಲ್ಲಿಯೇ ಆ ಕೋನುಗಳ ಅಳವಡಿಕೆಗೆ ತೆರೆ ಬಿತ್ತು.
ಈಗ ಮಗದೊಮ್ಮೆ ಬಸ್ ನಿಲ್ದಾಣದ ಪಕ್ಕ ಇನ್ನೆಲ್ಲಿ ಅಗತ್ಯವಾದ ರಸ್ತೆ ಬದಿಗಳಲ್ಲಿ ಟ್ರಾಫಿಕ್ ಕೋನುಗಳನ್ನು ಅಳವಡಿಸಿದರೂ ಕೆಲವು ಕಡೆಯ ಕೋನುಗಳು ತುಂಡಾಗಿವೆ ಇಷ್ಟೊಂದು ಚಾಲಕರ ನಿರ್ಲಕ್ಷ್ಯ ಯಾಕಾಗಿ   ಇವರ ಬಸ್ಸು ಇವರ ನಿಯಂತ್ರಣದಲ್ಲಿಲ್ಲವೇ   ನಿಜಕ್ಕೂ ಯಾವ ಚಾಲಕ ಇವುಗಳನ್ನು ತುಂಡರಿಸುತ್ತಾನೋ ಅಂತಹ ಚಾಲಕರಿಗೆ ದಂಡ ಹಾಕಿ  ಒಂದು ಕೋನ್ ವೆಚ್ಚ ಸುಮಾರು ರೂಪಾಯಿ 1300/- ಅಂತೆ  ಅದರ ವೆಚ್ಚವನ್ನು ಸಂಬಂಧಪಟ್ಟ ಚಾಲಕರಿಂದ ವಸೂಲು ಮಾಡಿ  ಕೋನ್ ಹಾಕಿರುವ ಬಸ್ ನಿಲ್ದಾಣ ಹಾಗೂ ಇತರ ಜಾಗಗಳು ಸಿ ಸಿ ಕ್ಯಾಮರಾ ಇಟ್ಟು ಯಾರು ಅದನ್ನು ತುಂಡರಿಸಿ ಹಾಳುಗೆಡಗಿದ್ದಾರೋ ಅವರಿಗೆ ಶಿಕ್ಷೆ ನೀಡಿ

  • ಜೆ ಎಫ್ ಡಿಸೋಜ ಅತ್ತಾವರ