ರಾಜರಥವೇರಲಿರುವ ಪುನೀತ್, ರಾಣಾ

ಮೊದಲ ಸಿನಿಮಾ `ರಂಗಿತರಂಗ’ ಚಿತ್ರದ ಮೂಲಕವೇ ಸ್ಟಾರ್ ನಿರ್ದೇಶಕನಾಗಿ ಹೊರಹೊಮ್ಮಿರುವ ಅನೂಪ್ ಭಂಡಾರಿಯ ಎರಡನೇ ಸಿನಿಮಾ `ರಾಜರಥ’ ಚಿತ್ರ ಜನವರಿ 25ರಂದು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು ಸಿನಿಮಾದ ಕುರಿತಾಗಿನ ಒಂದೊಂದೇ ಕುತೂಹಲಕರ ವಿಷಯ ಹೊರಬೀಳುತ್ತಿದೆ.

ಅನೂಪ್ ಸಹೋದರ ನಿರೂಪ್ ಭಂಡಾರಿ ಹಾಗೂ ಆವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಆರ್ಯ ಸಹ ಪಾತ್ರವೊಂದರಲ್ಲಿ ಅಭಿನಯಿಸಿದ್ದಾನೆ. ಈತನನ್ನು ಮಾತ್ರವಲ್ಲದೇ ನಿರ್ದೇಶಕ ಅನೂಪ್ ಭಂಡಾರಿ ಪುನೀತ್ ರಾಜಕುಮಾರ್ ಮತ್ತು ತೆಲುಗಿನ ನಟ ರಾಣಾ ದಗ್ಗುಬಾಟಿಯನ್ನೂ ಕರೆತರಲು ತೀರ್ಮಾನಿಸಿದ್ದಾರೆ. ಹೀಗಾಗಿ ಅವರಿಬ್ಬರನ್ನೂ ಈಗಾಗಲೇ ಸಂಪರ್ಕಿಸಿದ್ದು ಅವರೂ ಚಿತ್ರದಲ್ಲಿ ಅತಿಥಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.