ಮತಾಂತರಕ್ಕೆ ಬಂದವರ ಹಿಡಿದು ಕೊಟ್ಟರೂ ಯಾವುದೇ ಕ್ರಮ ಇಲ್ಲ

ಪೊಲೀಸ್ ವಿರುದ್ಧ ನಾಗರಿಕರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಊರವರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಿಡಿದೊಪ್ಪಿಸಿದ ಹಿಂದೂ ದೇವರನ್ನು ಮತ್ತು ನಂಬಿಕೆಗಳನ್ನು ಅವಹೇಳನಗೊಳಿಸುತ್ತಾ ಮತಾಂತರಕ್ಕೆ ಬಂದ ಕ್ರೈಸ್ತ ಮಿಷನರಿಗಳ ತಂಡದ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳದೆ ಪೆÇಲೀಸರು ಬಿಡುಗಡೆಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

mjr5-_chirstina_mission2

ಕಳೆದ ಸೋಮವಾರ ಹಾಡಹಗಲೇ ಪೆರ್ಲ ಪೇಟೆಯಲ್ಲಿ ಈ ಘಟನೆ ನಡೆದಿತ್ತು. ಸಿಆರೆಂ 8060 ನಂಬ್ರದ ಜೀಪಿನಲ್ಲಿ ಬಂದ ಕ್ರೈಸ್ತ ಮತೀಯ ವಿಭಾಗಕ್ಕೊಳಪಟ್ಟ ಮತಾಂತರಗೊಳಿಸುವ ಮಿಷನರಿಗಳ ತಂಡವೊಂದು ಹಿಂದೂ ದೇವತೆಗಳು ಮತ್ತು ಆಚಾರ ವಿಚಾರಗಳನ್ನು ಹೀಯಾಳಿಸುತ್ತಾ ಕ್ರೈಸ್ತ ಮತಾವಲಂಬಿಗಳಾಗಬೇಕೆಂದು ಪ್ರಚೋದಿಸುತ್ತಾ ಸಾರ್ವಜನಿಕರಿಗೆ ಮಲಯಾಳಂನಲ್ಲಿ ಮುದ್ರಿಸಿದ ಕರಪತ್ರಗಳನ್ನು, ಬೈಬಲ್ ಮೊದಲಾದವುಗಳನ್ನು ವಿತರಿಸಲು ಆರಂಭಿಸಿತ್ತು.

ಇದನ್ನು ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ನಾಗರಿಕರು ಸೇರಿಕೊಂಡು ಪೆರ್ಲ ಪ್ರದೇಶವು ಶಾಂತಿ-ಸೌಹಾದರ್ತೆಯಿಂದ ಎಲ್ಲರೂ ಕೂಡಿ ಬಾಳುವ ಪ್ರದೇಶವಾಗಿದೆ. ಇಲ್ಲಿ ಮತೀಯ ದ್ವೇಷ ಬಿತ್ತುವುದನ್ನು ಬಿಟ್ಟು ವಾಪಾಸ್ ತೆರಳಿ ಎಂದಾಗ ಮಿಷನರಿಗಳ ತಂಡವು ಇದನ್ನು ನಿರಾಕರಿಸಿ ಉದ್ದಟತನದಿಂದ ವರ್ತಿಸಿತ್ತು. ಇದು ಭಾರೀ ವಾಗ್ಯುದ್ಧಕ್ಕೆ ಮತ್ತು ಹೊೈಕೈಗೂ ಕಾರಣವಾಯಿತು. ಕೂಡಲೇ ಬದಿಯಡ್ಕ ಪೆÇಲೀಸರಿಗೆ ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕರು ಮತಾಂತರ ಮಾಡಲು ಬಂದ ವರ ತಂಡವನ್ನು ಸೆರೆಹಿಡಿದು ಪೆÇಲೀಸರಿಗೆ ಒಪ್ಪಿಸಿದರು. ಅಲ್ಲದೆ ಮಿಷನರಿಗಳು ಮತಾಂತರಕ್ಕೆ ಪ್ರಚೋದನೆ ನೀಡಿದ್ದ ಬಗ್ಗೆ ನಾರಾಯಣ ಎಂಬವರು ಬದಿಯಡ್ಕ ಪೆÇಲೀಸರಿಗೆ ಲಿಖಿತವಾಗಿ ದೂರನ್ನೂ ನೀಡಿದ್ದರೂ ಪೆÇಲೀಸರು ಯಾವೊಂದು ಕ್ರಮ ಕೈಗೊಂಡಿಲ್ಲವೆಂಬುದಾಗಿ ಆರೋಪಿಸಲಾಗಿದೆ.