ಮಂಗಳೂರಿನಲ್ಲೂ ಸಹ ಹೌಸ್ ಬೋಟ್ ಸೌಲಭ್ಯ ಒದಗಿಸಿ

ನಮ್ಮ ನೆರೆಹೊರೆಯ ಕೇರಳದಲ್ಲಿ ಹೌಸ್ ಬೋಟ್ ತಾಣ ಅಲ್ಲಲ್ಲಿದ್ದು ಇವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ  ಇಂತಹ ಹೌಸ್ ಬೋಟುಗಳಲ್ಲಿ ಬೇಕಾದಷ್ಟು ಸೌಲಭ್ಯಗಳಿವೆ. ಎರಡು ದಿನ ಹೌಸ್ ಬೋಟುನಲ್ಲಿ ಉಳಿದಲ್ಲಿ ತುಂಬಾ ಹಿತವೆನಿಸುವುದು. ಇದೇ ಮಾದರಿಯ ಹೌಸ್ ಬೋಟುಗಳನ್ನು ಶೀಘ್ರದಲ್ಲಿಯೇ ಉಡುಪಿಯ ಸ್ವರ್ಣ ನದಿಯಲ್ಲಿ ತೇಲಾಡಲಿವೆಯಂತೆ. ಇಂತಹ ಹೌಸ್ ಬೋಟ್ ವ್ಯವಸ್ಥೆ ಕುರಿತು ಜಿಲ್ಲಾಡಳಿತ ಪ್ರವಾಸೋದ್ಯಮ ಅಭಿವೃದ್ಧಿಗೆ ಆಸಕ್ತಿ ತೋರಿರುವುದು ಶ್ಲಾಘನೀಯ
ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ ಇಂತಹ ಹಲವಾರು ಯೋಜನೆಗಳನ್ನು ಆಯಾಯ ಜಿಲ್ಲಾಡಳಿತ ಆಸಕ್ತಿ ತೋರಿಸಿದರೆ ಪ್ರವಾಸಿಗರಿಗೆ ತುಂಬಾ ಖುಷಿಯಾಗಿ ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಜಾಸ್ತಿ. ಹಿಂದೊಮ್ಮೆ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ `ಹೆಲಿ ಟ್ಯೂರಿಸಂ’ ಕರಾವಳಿ ಪ್ರದೇಶದಲ್ಲಿ ಪ್ರಾರಂಭಿಸುವ ಬಗ್ಗೆ ಹಲವು ಬಾರಿ ಮಾತಾಡಿದ್ದೇ ಬಂತು. ಏನೂ ಬದನೆಕಾಯಿ ನಡೆಯಲಿಲ್ಲ. ಈಗಲಾದರೂ  ಹೆಲಿಟ್ಯೂರಿಸಂ ನ್ನು ಆರಂಭಿಸುವ ಯೋಜನೆಯನ್ನು ಈಗಿನ ಪ್ರವಾಸೋದ್ಯಮ ಸಚಿವರು ಆಸಕ್ತಿ ವಹಿಸಿದರೆ ಇದು ಸಾಧ್ಯವಾಗಬಹುದು. ಅಂತೆಯೇ ಉಡುಪಿಯಲ್ಲಿ ಹೌಸ್ ಬೋಟ್ ಸೌಲಭ್ಯವನ್ನು ಆರಂಭಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ತಣ್ಣೀರುಬಾವಿ ಹಾಗೂ ಇತರ ಪ್ರದೇಶದ ನದಿಗಳಲ್ಲಿ ಸಹ ಈ ಸೌಲಭ್ಯವನ್ನು ಒದಗಿಸಲು ಜಿಲ್ಲಾಡಳಿತ ಹಾಗೂ ಸರಕಾರ ಮುಂದಾಗಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು

  • ಜೆ ಎಫ್ ಡಿಸೋಜ  ಅತ್ತಾವರ