ಪ್ರತಿಭಟನೆಗೆ ಬಂದ ಹಿಂಜಾವೇಗಳು ಪೆÇಲೀಸರನ್ನು ಕಂಡು ಓಟ ಕಿತ್ತರು!

“ಪೆÇಲೀಸ್ ಠಾಣೆಯಲ್ಲಿ ಪೆÇಲೀಸರು ನಮಗೆಲ್ಲಾ ಗದರಿಸಿದ್ದಾರೆ. ಈ ಬಗ್ಗೆ ನಾವು ಪ್ರತಿಭಟನೆ

ಮಾಡಿಯೇ ಸಿದ್ದ” ಎಂದು ಹಿಂಜಾವೇ ಮುಖಂಡರು ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದರು.

ಕುಂದಾಪುರ : ಕಳೆದೆರಡು ದಿನಗಳ ಹಿಂದೆ ಭಿನ್ನಕೋಮಿನ ವಿದ್ಯಾರ್ಥಿಗಳು ಸಾಗುತ್ತಿದ್ದ ಕಾರನ್ನು ಕೋಟೇಶ್ವರದಲ್ಲಿ ತಡೆದು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೈತಿಕ ಪೆÇಲೀಸಗಿರಿ ನಡೆಸಿದ ಹಿಂಜಾವೇ ಮಖಂಡರಿಗೆ ಬೆವರಿಳಿಸಿದ ಠಾಣಾಧಿಕಾರಿ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಆಯೋಜಿಸಿದ್ದ ಪ್ರತಿಭಟನೆ ಠುಸ್ಸಾಗಿದೆ.

ಪ್ರತಿಭಟನೆಗೆ ಆಗಮಿಸಿದ್ದ ಒಂದಿಷ್ಟು ಬೆರಳೆಣಿಕೆಯ ಕಾರ್ಯಕರ್ತರು ಶಾಸ್ತ್ರೀ ವೃತ್ತದಲ್ಲಿ ಅಲ್ಲಲ್ಲಿ ನಿಂತಿದ್ದರು. ಈ ವೇಳೆಯಲ್ಲಿ ಪೆÇಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡರು.

ಮುಖಂಡರನ್ನು ವಶಕ್ಕೆ ಪಡೆದ ಕೂಡಲೇ ಗಾಬರಿಗೊಂಡ ಕೆಲ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತರು. ಇನ್ನು ಕೈಗೆ ಸಿಕ್ಕ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದಿದ್ದು, ಬಳಿಕ ಬಿಡುಗಡೆಗೊಳಿಸಿದ್ದಾರೆ.

ತಾಲೂಕಿನ ಗಂಗೊಳ್ಳಿಯಿಂದ ಹಾಗೂ ಕುಂದಾಪುರ, ಕೋಟೇಶ್ವರ ಸೇರಿದಂತೆ ಇತರ ಕಡೆಗಳಿಂದ ಕೆಲವೇ ಕಾರ್ಯಕರ್ತರು ಹಿಂದೂ ಜಾಗರಣಾ ವೇದಿಕೆಯ ಪ್ರತಿಭಟನಾ ಕರೆಗೆ ಓಗೊಟ್ಟು ಸಂಜೆ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಒಟ್ಟುಗೂಡಿದ್ದರು.

ಏನೂ ಕಾರಣವಿಲ್ಲದ ಈ ಪ್ರತಿಭಟನೆಗೆ ಪೆÇಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಅಲ್ಲದೇ ಪರೋಕ್ಷವಾಗಿ ಬಿಜೆಪಿಯ ಬೆಂಬಲಿತ ಸಂಘಟನೆಗಳು ಬೆಂಬಲಿಸುವುದಿಲ್ಲವೆಂಬ ಮಾತುಗಳು ಎಲ್ಲಡೆ ಕೇಳಿಬಂದಿತ್ತು.

“ಪೆÇಲೀಸ್ ಠಾಣೆಯಲ್ಲಿ ಪೆÇಲೀಸರು ನಮಗೆಲ್ಲಾ ಗದರಿಸಿದ್ದಾರೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡಿಯೇ ಸಿದ್ದ” ಎಂದು ಹಿಂಜಾವೇ ಮುಖಂಡರು ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದರು.

ಈ ಬಗ್ಗೆ ಎರಡು ದಿನಗಳಿಂದ ವಾಟ್ಸ್ಯಾಪ್ ಮತ್ತು ಫೇಸ್ಬುಕ್ಕಿನಲ್ಲಿ `ನಾಸೀರ್ ಹುಸೇನ್ ಹಿಂದೂ ವಿರೋಧಿ’ ಎಂಬ ಬರಹಗಳನ್ನು ಹರಿಯಬಿಟ್ಟು ಹಿಂದೂ ಯುವಕರನ್ನು ಕೆರಳಿಸುವ ಯತ್ನವೂ ನಡೆಸಲಾಗಿತ್ತು. ಆದರೆ ಸತ್ಯಾಸತ್ಯತೆ ಅರಿತ ನಾಗರಿಕರು ಹಿಂಜಾವೇ ಕರೆಕೊಟ್ಟ ಪ್ರತಿಭಟನೆಗೆ ಹಾಜರಾಗದೆ ಠಾಣಾಧಿಕಾರಿ ನಾಸೀರ್ ಹುಸೇನರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು.

ಭಾಗಿಯಾಗದ ಅರವಿಂದ ಭಿನ್ನಕೋಮಿನ ವಿದ್ಯಾರ್ಥಿಗಳಿಗೆ ಹಲ್ಲೆಗೈದ ತಂಡದ ಮುಂದಾಳು ಈ ಹಿಂದೆ ತಮ್ಮದೆ ಕಾರ್ಯಕರ್ತ ಕೆಂಜೂರಿನ ಪ್ರವೀಣ್ ಪೂಜಾರಿಯನ್ನು ಹೊಡೆದು ಸಾಯಿಸಿದ ಆರೋಪದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಬಿಡುಗಡೆಗೆಗೊಂಡಿರುವ ಅರವಿಂದ ಕೋಟೇಶ್ವರ ಈ ಪ್ರತಿಭಟನೆಗೆ ಭಾಗಿಯಾಗಿರಲಿಲ್ಲ.

ಪ್ರಕರಣ ನಡೆದ ದಿನ ಪೆÇಲೀಸ್ ಠಾಣೆಯ ಎದುರು ಹಾಜರಿದ್ದು ಪೆÇಲೀಸರಿಗೆ ಉಡಾಫೆಯಾಗಿ ಮಾತನಾಡಿದ್ದಕ್ಕೆ ಈತನು ಸೇರಿದಂತೆ 9 ಮಂದಿಯ ವಿರುದ್ದ ಪೆÇಲೀಸರು ಮುಂಜಾಗ್ರತಾ ಕ್ರಮ ಕೇಸ್ ದಾಖಲಿಸಿದ್ದರು.

ಜಾಲಾತಾಣದಲ್ಲಿ ಬಿರುಸಿನ ಚರ್ಚೆ ಸಾಮಾಜಿಕ ಜಾಲಾತಾಣಗಳಲ್ಲಿಯೂ ಈ ಬಗ್ಗೆ ಚರ್ಚೆಗಳು ಏರ್ಪಟ್ಟಿದ್ದು, “ನಾಸೀರ್ ಹುಸೇನ್ ಎಂದೂ ಮುಸ್ಲಿಮರ ಓಲೈಕೆ ಮಾಡಿಲ್ಲ. ಅವರು ಎಲ್ಲಾ ಧರ್ಮದವರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಚಾರಿತ್ರ್ಯಹರಣ ಸಲ್ಲದು” ಎಂಬ ಬರಹಗಳು ಜಾಲಾತಾಣಗಳಲ್ಲಿ ಹರಿದಾಡತೊಡಗಿದ್ದವು.

ಅಲ್ಲದೇ ಪ್ರಜ್ಞಾವಂತ ನಾಗರಿಕರು ಹಿಂಜಾವೇಯನ್ನು ಟೀಕಿಸಿ ಕಮೆಂಟ್  ಮಾಡಿದ್ದು ಪ್ರಕರಣದ ವಾಸ್ತವಾಂಶ ಅರಿತು ಈ ಪ್ರತಿಭಟನೆಗೆ ನಾಗರಿಕರೆಲ್ಲರೂ ಭಾಗಿಯಾಗಬಾರದು ಎಂದು ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬೀಚಲ್ಲಿ ತಿರುಗಾಟಕ್ಕೆ ಬಂದಿದ್ದ ಭಿನ್ನ ಕೋಮುಗಳ ವಿದ್ಯಾರ್ಥಿಗಳ ತಂಡದ ಮೇಲೆ ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಪ್ರವೀಣ ಪೂಜಾರಿ ಹತ್ಯೆ ಆರೋಪಿ ಅರವಿಂದ ಕೋಟೇಶ್ವರ, ಅಶೋಕ, ರಾಕೇಶ್, ಕಿರಣ್, ರಂಜನ್, ಕಿರಣ್, ಅನಿಲ್, ಸಂಪತ್, ಶಂಕರ ಕೋಟ ಎಂಬವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಕುಂದಾಪುರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಹಿಂಜಾವೇ ಮುಖಂಡರ ಅನೈತಿಕ ಪೆÇಲೀಸ್ ಗಿರಿಯನ್ನು ಪ್ರಶ್ನೆ ಮಾಡಿದ್ದ ಸಿಪಿಐ ಮಂಜಪ್ಪ ಹಾಗೂ ಠಾಣಾಧಿಕಾರಿ ನಾಸೀರ್ ಅವರಿಗೆ ಕೆಂಜೂರು ಪ್ರವೀಣ ಪೂಜಾರಿ ಹತ್ಯೆಯ ಆರೋಪಿ ಅರವಿಂದ ಕೋಟೇಶ್ವರ ಹಾಗೂ ಇತರರು “ಇನ್ನು ಮುಂದೆ ಯಾವುದೇ ಮಾಹಿತಿ ಪೆÇಲೀಸರಿಗೆ ತಿಳಿಸದೆ ನಾವೇ ನೋಡಿಕೊಳ್ಳುತ್ತೇವೆ” ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಈ ರೀತಿಯಾಗಿ ಪೆÇಲೀಸರಿಗೆ ಬೆದರಿಕೆಯೊಡ್ಡಿದ 9 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಬಿಗು ಬಂದೋಬಸ್ತ್ ಅನುಮತಿ ಇಲ್ಲದ ನಡುವೆಯೂ ಪ್ರತಿಭಟನೆಗೆ ಮುಂದಾಗುವ ಬಗ್ಗೆ  ಬಿಗು ಪೆÇಲೀಸ್ ಬಂದೋಸಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಎಸ್ಪಿ ಸಂಜೀವ ಪಾಟೀಲ್ ಕೂಡಾ ಕುಂದಾಪುರದಲ್ಲಿ ಮೊಕ್ಕಾಂ ಹೂಡಿದ್ದರು. ಸಿಪಿಐ ಮಂಜಪ್ಪ, ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದಲ್ಲಿ ಕೆಎಸ್‍ಆರ್ಪಿ, ಡಿಎಆರ್ ತುಕಡಿ ಹಾಗೂ ನೂರಾರು ಸಿಬ್ಬಂದಿ ನೇಮಕ ಮಾಡಲಾಗಿತ್ತು.