ಮಸೀದಿಗೆ ಕಲ್ಲೆಸೆತ ಆರೋಪಿಗಳ ಬಂದನಕ್ಕೆ ವಿಳಂಬ : ಮುಲ್ಕಿ ಠಾಣೆಗೆ ಮುತ್ತಿಗೆ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ದಿನಗಳ ಹಿಂದೆ ಮುಲ್ಕಿಯ ಕೆ ಎಸ್ ರಾವ್ ನಗರ ಮತ್ತು ಹಳೆಯಂಗಡಿಯ ಸಂತೆ ಕಟ್ಟೆಯಲ್ಲಿರುವ ಮಸೀದಿಗಳಿಗೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಒಳಗೆ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿರುವ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರವುದರ ಬಗ್ಗೆ ಎರಡು ಮಸೀದಿಗಳ ಮುಖ್ಯಸ್ತರು ಮುಲ್ಕಿ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.

ಜನವರಿ 14ರ ರಾತ್ರಿ ಕೆ ಎಸ್ ರಾವ್ ನಗರದಲ್ಲಿರುವ ಹಾಗೂ ಹಳೆಯಂಗಡಿಯ ಸಂತೆ ಕಟ್ಟೆಯಲ್ಲಿರುವ ಮಸೀದಿಗೆ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದರು. ಇದರಿಂದ ಮಸೀದಿಯ ಕಿಟಕಿಯ ಗಾಜುಗಳು ಹುಡಿಯಾಗಿ ಮಸೀದಿಗೆ ನಷ್ಟ ಸಂಭವಿಸಿತ್ತು. ಈ ಬಗ್ಗೆ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶಾಸಕರು ಒಂದು ವಾರದ ಒಳಗೆ ಅರೋಪಿಗಳನ್ನು ಬಂಧಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಇದೀಗ ವಾರ ಕಳೆದರೂ ಘಟನೆ ನಡೆದ ಪ್ರದೇಶದಲ್ಲಿನ ಸೀಸಿ ಕ್ಯಾಮರಾಗಳಿಂದ ಮಾಹಿತಿ ಸಿಕ್ಕಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಮುಲ್ಕಿ ಪೆÇೀಲಿಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಎರಡು ಮಸೀದಿಗಳ ಸಮಿತಿಯ ಅಧ್ಯಕ್ಷರುಗಳು ಆರೋಪಿಸಿದ್ದಾರೆ.

ಘಟನೆ ನಡೆದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಠಾಣಾಧಿಕಾರಿಗಳು ಆರೋಪಿಗಳನ್ನು ಶೀಘ್ರದಲ್ಲಿ ಬಂದಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಸ್ಥಳೀಯ ಕೆಲವು ಮಂದಿ ಶಂಕಿತರನ್ನು ಸಿಸಿಬಿ ಪೆÇಲೀಸರು ವಿಚಾರಣೆ ನಡೆಸಿದ್ದು, ಆ ಬಳಿಕ ಯಾವುದೇ ಬೆಳವಣಿಗೆ ಆಗದಿರುವುದರಿಂದ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮುಲ್ಕಿ ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.