ರಸ್ತೆ ರಿಪೇರಿಗೆ ಆಗ್ರಹಿಸುವವರು ಮಳೆ ಬರುವ ಮುಂಚೆ ಪ್ರತಿಭಟಿಸಿದರೆ ಸೂಕ್ತ

ದ ಕ ಜಿಲ್ಲೆಯಲ್ಲಿ ಮಳೆ ಆರಂಭವಾದ ತಕ್ಷಣ ಎಲ್ಲೆಡೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅನರ್ಹವಾಗಿರುವುದು ಸಾಮಾನ್ಯ. ಈ ಬಗ್ಗೆ ರಸ್ತೆ ರಿಪೇರಿ ಆಗ್ರಹಿಸಿ ಒಂದಷ್ಟು ಪ್ರತಿಭಟನೆ ವರ್ಷ ವರ್ಷವೂ ನಡೆಯುತ್ತಿರುವುದು ಸರ್ವೇ ಸಾಮಾನ್ಯ. ನಿಜವಾಗಿ ನೋಡಿದರೆ ಮಳೆಗಾಲದಲ್ಲಿ ಇಂತಹ ಪ್ರತಿಭಟನೆಯನ್ನು ಮಾಡಿ ಯಾವ ಪುರುಷಾರ್ಥವನ್ನೂ ಸಾಧಿಸಿದಂತಾಗುವುದಿಲ್ಲ. ಯಾಕೆಂದರೆ ಮಳೆಗಾಲದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡುವುದಕ್ಕೆ ಆಗುವುದಿಲ್ಲ. ತಾತ್ಕಾಲಿಕ ರೀತಿ ಗುಂಡಿಗೆ ಮಣ್ಣು ಹಾಕಿ ಮುಚ್ಚಿದರೂ ಅದರಿಂದ ಸಾರ್ವಜನಿಕರಿಗೆ ಅನಾನುಕೂಲತೆಯೇ ಜಾಸ್ತಿ. ಈ ಎಲ್ಲಾ ಪ್ರತಿಭಟನೆ ಕೆಲಸವನ್ನು ಮಳೆ ಬೀಳುವುದಕ್ಕಿಂತ ಒಂದು ತಿಂಗಳ ಮುಂಚೆ ಮಾಡಬೇಕು. ಆಗ ಸ್ವಲ್ಪವಾದರೂ ಪರಿಣಾಮ ಬೀರಿತು. ಜನಪ್ರತಿನಿಧಿಗಳನ್ನು ಮಳೆ ಬಂದ ನಂತರ ಕಾಡುವುದಕ್ಕಿಂತ ಮಳೆ ಬೀಳುವ ಮೊದಲೇ ಅವರಿಗೆ ಆಗಾಗ ನೆನಪು ಮಾಡುತ್ತಾ ಕಿರಿಕಿರಿ ಮಾಡುತ್ತಿರಬೇಕು ಆದ್ದರಿಂದ ಮಳೆಗಾಲ ಆರಂಭವಾದ ಮೇಲೆ ಪ್ರತಿಭಟನೆ ಕೇವಲ ಪ್ರಚಾರಕ್ಕೆ ದ್ವೇಷ ಸಾಧನೆಗೆ ಮಾತ್ರ ಆಗದಿರಲಿ

  • ಎಸ್ ಎಂ  ಪುತ್ತೂರು