ಮಹಿಳಾ ದೌರ್ಜನ್ಯ ವಿರುದ್ಧ ಮೆರವಣಿಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಹಾಗೂ ಮಹಿಳೆಯರಿಗೆ ಸುರಕ್ಷೆಯ ಕೊರತೆಗೆ ಪರಿಹಾರ ಕಂಡುಕೊಳ್ಳಲು ಆಗ್ರಹಿಸಿ ಕಾಸರಗೋಡು ಟೌನ್ ಬ್ಯಾಂಕ್ ಸೆಂಟಿನರ್ ಹಾಲಲ್ಲಿ ನಡೆದ ಯುವ ಮೋರ್ಚಾ ಮಹಿಳಾ ಸಮ್ಮೇಳನದ ಭಾಗವಾಗಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.

ಕಾಸರಗೋಡು ಯುವ ಮೋರ್ಚಾದ ನೇತೃತ್ವದಲ್ಲಿ ನಡೆದ ಸಮ್ಮೇಳನವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ ನಾಯ್ಕ್ ಉದ್ಘಾಟಿಸಿದರು.