ಹಲ್ಲೆ ಖಂಡಿಸಿ ಇಂದು ಮಂಗಳೂರಲ್ಲಿ ಧರಣಿ

ಅನಂತಕುಮಾರ್ ಹೆಗಡೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗ್ಡೆ ಶಿರಸಿಯಲ್ಲಿ ವೈದ್ಯರ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ಖಂಡಿಸಿ ವಿವಿಧ ವೈದ್ಯ ಸಂಘಟನೆಗಳು ಶನಿವಾರದಂದು (ಇಂದು) ಪ್ರತಿಭಟನೆ ಹಮ್ಮಿಕೊಂಡಿವೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ), ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ (ಎಎಂಸಿ) ಮತ್ತು ಕೆನರಾ ಆರ್ಥೋಪೆಡಿಕ್ಸ್ ಸೊಸೈಟಿ ಸಂಘಟನೆಗಳು ಜಂಟಿಯಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಸಂಸದ ಅನಂತ್ ವಿರುದ್ಧ ಸರಕಾರವು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಎಲ್ಲಾ ಸಂಘಟನೆಗಳು ಆಗ್ರಹಿಸಿವೆ.

ಪತ್ರಕರ್ತರೊಂದಿಗೆ ಮಾತನಾಡಿದ ಮಂಗಳೂರು ಐಎಂಎ ಅಧ್ಯಕ್ಷ ಡಾ ರಾಘವೇಂದ್ರ ಭಟ್, “ವೈದ್ಯರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ಜವಾಬ್ದಾರಿಯುತ ಸಂಸದರೊಬ್ಬರು ಪ್ರಜಾಪ್ರಭುತ್ವದಲ್ಲಿನ ಮೌಲ್ಯಗಳನ್ನು ನಾಶ ಮಾಡಿದ್ದಾರೆ. ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯರಾತ್ರಿ ಸಂಸದರು ವೈದ್ಯ ಮಧುಕೇಶ್ವರ್ ಅವರ ಕಾಲರ್ ಹಿಡಿದು ಕೈಯಿಂದ ಹಲ್ಲೆ ನಡೆಸಿದ್ದರು. ಅಲ್ಲದೆ ಇತರ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸುವುತ್ತೇವೆ” ಎಂದರು.