ರಿಯಾಝ್ ಮೌಲವಿ ಕೊಲೆ ಕೇಸಿನ ಸಮಗ್ರ ತನಿಖೆ ಆಗ್ರಹಿಸಿ ಎಸ್ಪಿ ಕಚೇರಿಗೆ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಇತ್ತೀಚೆಗೆ ಬರ್ಬರ ಕೊಲೆಗೈಯಲ್ಪಟ್ಟ ರಿಯಾಝ್ ಮೌಲವಿ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ವತಿಯಿಂದ ಎಸ್ಪಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು. ಮೌಲವಿ ಕೊಲೆಯು ತಂತ್ರಪೂರ್ವಕವಾಗಿ ನಡೆದ ಕೃತ್ಯವಾಗಿರುವುದಾಗಿ ಎಸ್ ಡಿ ಪಿ ಐ ಆರೋಪಿಸಿದೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವು ಶಂಕೆಗಳು ಈಗಾಗಲೇ ವ್ಯಕ್ತವಾಗುತ್ತಿದ್ದರೂ ಪೆÇಲೀಸರು ಸಮಗ್ರ ತನಿಖೆಗೆ ಯಾಕೆ ಮುಂದಾಗುತ್ತಿಲ್ಲವೆಂದು ಎಸ್ ಡಿ ಪಿ ಐ ಪ್ರಶ್ನಿಸಿದೆ.

ಎಸ್ಪಿ ಕಚೇರಿ ಮುಂಭಾಗದಲ್ಲಿ ನಡೆದ ಧರಣಿಯನ್ನು ಮಾನವ ಹಕ್ಕು ಹೋರಾಟಗಾರ ಗ್ರೋ ವಾಸು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊಲೆಗೈಯಲ್ಪಟ್ಟ ವ್ಯಕ್ತಿ ಈ ಪ್ರದೇಶವಾಸಿಯಾಗಿದ್ದಾರೆ. ಅವರಿಗೆ ತಂದೆ ತಾಯಿ, ಹೆಂಡ್ತಿ ಮಕ್ಕಳು ಇದ್ದಾರೆ. ಇವರು ಯಾವುದೇ ಜಾತಿ ಆಗಿದ್ದರೂ ಈ ರೀತಿಯ ಕೊಲೆ ನಡೆಸಬಾರದಿತ್ತು. ದೀರ್ಘ ಸಮಯದ ತಂತ್ರಗಾರಿಕೆಯಿಂದ ಕೊಲೆ ನಡೆದಿರುವುದು ಖಚಿತವಾಗುತ್ತಿದ್ದರೂ ಪೆÇಲೀಸರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದರು. ನೇತಾರರ ಸಹಿತ ಹಲವಾರು ಮಂದಿ ಪಾಲ್ಗೊಂಡರು.