ರೇಂಜರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ವೇಣೂರು ವಲಯ ಅರಣ್ಯಾಧಿಕಾರಿ ಮರಗಳ್ಳತನದ ಆರೋಪದಲ್ಲಿ ಅಮಾಯಕನ ಮೇಲೆ ದೌರ್ಜನ್ಯ ಎಸಗಿದ ವೇಣೂರು ವಲಯ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.

ತಹಶೀಲ್ದಾರ್ ಗುರುವಾರ ಮನವಿ ಸ್ವೀಕರಿಸದ ಹಿನ್ನೆಲೆಯಲ್ಲಿ ಶುಕ್ರವಾರ ಕೂಡ ಧರಣಿ ಸತ್ಯಾಗ್ರಹವನ್ನು ಮುಂದುವರಿಸಲು ಅಖಿಲ ಭಾರತ ಕಾರ್ಮಿಕ ಸಂಘವು ನಿರ್ಧರಿಸಿದೆ. ಸಂತ್ರಸ್ತ ಸುದರ್ಶನ್ ಶೇರಿಗಾರ್, ಅವರ ತಾಯಿ ರತ್ನಾ, ತಂದೆ ಆನಂದ ಶೇರಿಗಾರ್, ಸಹೋದರಿಯರು, ಅಖಿಲ ಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುಧತ್ತ ಜೈನ್, ಹೋರಾಟದ ಪ್ರಮುಖರಾದ ನಾರಾಯಣ ಪೂಜಾರಿ, ನಾಗೇಂದ್ರ ಪರಿಂಜೆ, ರಾಜೇಂದ್ರ ಪೂಜಾರಿ ಬರ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೇಂಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.