ರೋರೋ ಲಾರಿಗಳಲ್ಲಿ ಓವರ್ ಲೋಡ್ ಸಂಚಾರ : ಪ್ರತಿಭಟನೆ

ಸಾಂದರ್ಭಿಕ ಚಿತ್ರ


ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಓವರ್ ಲೋಡ್ ಮಾಡಿಕೊಂಡು ಹಾಗೂ ಜಿ ಎಸ್ ಟಿ ತಪ್ಪಿಸಿ ಓಡಾಡುವ ಐದು ರೋರೋ ಲಾರಿಗಳನ್ನು ಸುರತ್ಕಲಿನಲ್ಲಿ ಲಾರಿ ಚಾಲಕ ಮಾಲಕರ ಹಿತರಕ್ಷಣಾ ಸೇನಾ ಕಾರ್ಯಕರ್ತರು ತಡೆಹಿಡಿದು ಪ್ರತಿಭಟನೆ ನಡೆಸಿದರು. ಆರ್ಟಿಒ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಇಂತಹ ರೋರೋ ಲಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಂತಹ ಸರಕು ಲಾರಿಗಳಲ್ಲಿ 15 ಅಧಿಕ ಓವರ್ ಲೋಡ್ ಕಂಡು ಬಂದಿದೆ. ತೂಕ ಮಾಡುವ ಸಂದರ್ಭದಲ್ಲಿ ಇದು ಪತ್ತೆಯಾಗಿದೆ. ಈ ಬಗ್ಗೆ ಆರ್ಟಿಒ ಅಧಿಕಾರಿಗಳಲ್ಲಿ ದೂರಿದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋರೋ ಅಧಿಕಾರಿಗಳು, ಏಜೆಂಟುಗಳು ಹಾಗೂ ಆರ್ಟಿಒ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸಂಚಾಲಕ ನವೀನ್ ರಾಜ್ ಆರೋಪಿಸಿದ್ದಾರೆ.

 

 

LEAVE A REPLY