ಹಂಗಾರಕಟ್ಟೆ ಫಿಶ್ಮಿಲ್ ಪೌಡರ್ ಘಟಕದ ವಿರುದ್ಧ ಪ್ರತಿಭಟನೆ

ಪಂಚಾಯತ್ ಮುಂದೆ ಧರಣಿ ಕುಳಿತ ಮಕ್ಕಳು ಮತ್ತು ನಾಗರಿಕರು

ಉಡುಪಿ : ಇಲ್ಲಿನ ಮಾಬುಕಳದ ಹಂಗಾರಕಟ್ಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫಿಶ್ಮಿಲ್ ಮತ್ತು ಸಂಸ್ಕರಣಾ ಘಟಕವನ್ನು ವಿರೋಧಿಸಿ ಸಾರ್ವಜನಿಕರು ಬುಧವಾರದಂದು ಬೀದಿಗಳಿದು ಪ್ರತಿಭಟನೆ ನಡೆಸಿದರು.

ಬಾಳ್ಕುದ್ರು ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 80 ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 350ಕ್ಕೂ ಅಧಿಕ ಮಂದಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಮುಂದೆ ಧರಣಿ ಕುಳಿತು ಘಟಕಕ್ಕೆ ಅನುಮತಿ ನೀಡಿರುವ ಸರಕಾರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಸಮಿತಿ ಸಂಚಾಲಕ ಮಂಜುನಾಥ್ ಬಾಳ್ಕುದ್ರು ಮಾತನಾಡಿ, “ಇಷ್ಟು ವರ್ಷ ಹಂಗಾರಕಟ್ಟೆ ಪರಿಸರದಲ್ಲಿ ಶಾಂತಿ ಇತ್ತು. ಆದರೆ ಫಿಶ್ಮಿಲ್ ಘಟಕದ ನಿರ್ಮಾಣದಿಂದ ಇಲ್ಲಿ ಅಶಾಂತಿ ಉಂಟಾಗಿದೆ. ಈ ಘಟಕದಿಂದ ಪರಿಸರ ನಾಶವಾಗಲಿದೆ, ಪಕ್ಕದಲ್ಲೇ ಇರುವ ಶಾಲಾ ಮಕ್ಕಳ ಸಹಿತ ಎಲ್ಲರೂ ರೋಗದಿಂದ ಬಳಲುವ ಸಾದ್ಯತೆ ಇದೆ” ಎಂದು ಭೀತಿ ವ್ಯಕ್ತಪಡಿಸಿದರು.

ಬಾಳ್ಕುದ್ರುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾ¯ಯ ವಿದ್ಯಾರ್ಥಿಗಳು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಈ ಘಟಕದಿಂದ ಆಗುವ ಹಾನಿಯ ಬಗ್ಗೆ ಎಚ್ಚೆತ್ತು ಘಟಕವನ್ನು ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.