`ಲೈಫ್’ ಫಲಾನುಭವಿ ಪಟ್ಟಿ ಅವ್ಯವಸ್ಥೆ ಖಂಡಿಸಿ ಬಿಜೆಪಿ ಸದಸ್ಯರಿಂದ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ

ನಮ ಪ್ರತಿನಿಧಿ ವರದಿ

ಕಾಸರಗೋದು : ಲೈಫ್ ಯೋಜನೆಯ ಫಲಾನುಭವಿಗಳ ಅಂತಿಮ ಪಟ್ಟಿ ಅವ್ಯವಸ್ಥೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬದಿಯಡ್ಕ ಗ್ರಾಮ ಪಂಚಾಯತು ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.

ಸುಮಾರು 2000 ಮಂದಿ ಭವನರಹಿತರು ಬದಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರು. ಸರಕಾರದ ನೂತನ ಆದೇಶದಂತೆ ಸ್ವಂತವಾಗಿ ಪಡಿತರ ಕಾರ್ಡ್ ಹೊಂದಿದ, 10 ಸೆಂಟ್ಸ್ ಸ್ಥಳ ಇದ್ದವರನ್ನು ಮಾತ್ರ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಬಹುದಾಗಿದೆ. ಈ ಪ್ರಕಾರ 65 ಮಂದಿಯ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಅಂತಿಮ ಪಟ್ಟಿ ಪ್ರಕಟಗೊಂಡಾಗ 30 ಸೆಂಟ್ಸ್ ಸ್ಥಳ ಇದ್ದವರೂ ಅಂತಿಮ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಧರಣಿಯಲ್ಲಿ ಪ್ರತಿಭಟನಾಕಾರರು ಆರೋಪಿಸಿದರು.  ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಬಿಜೆಪಿ ಸದಸ್ಯರು ತಿಳಿಸಿದ್ದಾರೆ.