ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ವಿರುದ್ಧ ನಗರದಲ್ಲಿ ಪ್ರತಿಭಟನೆ

ಕರಾವಳಿ ಅಲೆ ವರದಿ

ಮಂಗಳೂರು : ಸಹೋದ್ಯೋಗಿ ಯುವಕ, ಯವತಿ ಮೇಲೆ ತಂಡದಿಂದ ನಡೆದ ಹಲ್ಲೆ, ಲೈಂಗಿಕ ದೌರ್ಜನ್ಯ ಘಟನೆಯನ್ನು ಖಂಡಿಸಿ ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರು ನಗರದ ಬಾವುಟಗುಡ್ಡೆ ಲೈಟ್ ಹೌಸ್ ಹಿಲ್ ಬಳಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.

ಯುವತಿಯರಿಗೆ ಮಂಗಳೂರು ನಗರದಲ್ಲಿ ಅಡ್ಡಾಡಲು ಭಯವಾಗುತ್ತಿದೆ ಎಂದು ಆತಂಕ ತೋಡಿದ ವಿದ್ಯಾರ್ಥಿಗಳು, ನಗರದಲ್ಲಿ ನಡೆದ ಹಲವು ಘಟನೆಗಳನ್ನು ಖಂಡಿಸಿ ನೈತಿಕ ಪೊಲೀಸಗಿರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಸಾಮಾಜಿಕ

ಕಾರ್ಯಕರ್ತೆ ವಿದ್ಯಾ ದಿನಕರ್, “ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮತ್ತೆ ನೈತಿಕ ಪೊಲೀಸಗಿರಿ ಹೆಚ್ಚಾಗುತ್ತಿದೆ. ಯುವತಿಯರು ಸುರಕ್ಷಿತವಾಗಿರದೇ ಅಭದ್ರತೆ ಕಂಡು ಬರುತ್ತಿದೆ. ರಾಜ್ಯ ಸರಕಾರ, ಇಲ್ಲಿನ ಆಡಳಿತ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದ್ಯಪಾಡಿ ಘಟನೆಯನ್ನು ಉಲ್ಲೇಖಿಸಿದ ಅವರು, “ಕೇವಲ ಕಾರಿನಲ್ಲಿ ತೆರಳುತ್ತಿದ್ದ ಮಾತ್ರಕ್ಕೆ ಗೂಂಡಾಗಳು ಯುವತಿ, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ವಿಡಿಯೋ, ಚಿತ್ರ ತೆಗೆದು ಮಾನಹಾನಿ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಕಾರಿನಲ್ಲಿ ಕುಳಿತು ಹೋಗುವುದೂ ತಪ್ಪೇ” ಎಂದು ಪ್ರಶ್ನಿಸಿದರು.

 

 

LEAVE A REPLY