ಬಸ್ ನೌಕರರಿಗೆ ರಕ್ಷಣೆ ಒದಗಿಸಲು ಒತ್ತಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ನಿರಂತರವಾಗಿ ಕಲ್ಲೆಸೆಯುತ್ತಿರುವುದರ ಹಿಂದೆ ಬುಡಮೇಲು ಕೃತ್ಯ ಮತ್ತು ಸಂಚಿನ ಶಂಕೆ ಇರುವುದಾಗಿ ಬಿಜೆಪಿ ಜಿಲಾಧ್ಯಕ್ಷ ಶ್ರೀಕಾಂತ್ ಆರೋಪಿಸಿದ್ದಾರೆ.

ಕಾಸರಗೋಡಿನ ಎರಿಯಾಲ್, ಚೌಕಿ, ಮೊಗ್ರಾಲು ಪುತ್ತೂರು, ಮೊಗ್ರಾಲು, ಪೆರುವಾಡ್, ಆರಿಕ್ಕಾಡಿ, ಕುಕ್ಕಾರು, ಉಪ್ಪಳ ಗೇಟು, ಪೆÇಸೋಟು ಮೊದಲಾದೆಡೆಗಳಲ್ಲಿ ಹಲವು ಕಾಲದಿಂದ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲೆಸೆಯುವ ಕೃತ್ಯವನ್ನು ನಡೆಸುತ್ತಾ ಬಂದಿದ್ದಾರೆ. ಈ ಕೃತ್ಯವನ್ನು ಕಾನೂನು ಪಾಲಕರು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸದಿರುವುದು ಅಕ್ರಮಿಗಳಿಗೆ ಅನುಕೂಲವಾದಂತಾಗಿದೆ. ಈ ಕುರಿತು ಗಂಭೀರವಾಗಿ ಸಮಗ್ರ ತನಿಖೆ ನಡೆಸಬೇಕು ಮತ್ತು ಬಸ್ ಹಾಗೂ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿವಿಧ ಪ್ರದೇಶಗಳಿಂದ ಹಲವು ಬಾರಿ ಕಲ್ಲು ತೂರಾಟ ನಡೆದರೂ ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಲು ಪೆÇಲೀಸರಿಂದ ಸಾಧ್ಯವಾಗಿಲ್ಲ. ಇದುವೇ ಅಕ್ರಮಿಗಳಿಗೆ ವರದಾನವಾಗಿ ಪರಿಣಮಿಸಿದೆ. ಆರೋಪಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡವನ್ನೇ ನಿಯೋಜಿಸಬೇಕು. ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಕಲ್ಲೆಸೆದ ಆರೋಪಿಯನ್ನು ಪೆÇಲೀಸ್ ಠಾಣೆಯಿಂದ ಬಿಡಿಸಿದ ಮಂಜೇಶ್ವರ ಶಾಸಕರ ಕ್ರಮವು ಆರೋಪಿಗಳಿಗೆ ಒತ್ತಾಸೆ ನೀಡುವುದಕ್ಕೆ ಸಮಾನವಾಗಿದೆ ಎಂದು ಅವರು ತಿಳಿಸಿದರು. ಸ್ವಂತ ಮಂಡಲದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಮಯವಿಲ್ಲದ ಶಾಸಕ ಪಿ ಬಿ ಅಬ್ದುಲ್ ರಸಾಕ್ ಅವರು ಬಸ್ಸಿಗೆ ಕಲ್ಲೆಸೆದ ಆರೋಪಿಯನ್ನು ಬಿಡಿಸಲು ಪೆÇಲೀಸ್ ಠಾಣೆಗೆ ಧಾವಿಸಿ ಬಂದಿದ್ದಾರೆ. ಹೊಂಡಗುಂಡಿಗಳಿಂದ ಪ್ರಯಾಣಕ್ಕೆ ದುಸ್ಸಾಹಸವಾಗಿ ಬದಲಾಗಿರುವ ರಸ್ತೆಗಳ ಶೋಚನೀಯಾವಸ್ಥೆಯನ್ನು ಬಗೆಹರಿಸಲು ಸಮಯವೇ ಇಲ್ಲದ ಶಾಸಕರ ನೀತಿ ಸರಿಯಲ್ಲ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.