`ಹಿಂದೂ ಯುವತಿಯರಿಗೆ ರಕ್ಷಣೆ ನಮ್ಮ ಗುರಿ’ ಎಂದ ಬಜರಂಗದಳ

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ ರಾಜಕಾರಣಿಗಳು ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದರೆ, ಅತ್ತ ಸ್ವಯಂ-ಘೋಷಿತ `ನೈತಿಕ ಪೊಲೀಸ್’ ಪಡೆ ಯುವತಿಯರು `ಜಿಹಾದಿ’ ಪಡೆಗಳಿಂದ `ಬಚಾವ್’ ಮಾಡಲು ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಬಜರಂಗ ದಳ ಕಾರ್ಯಕರ್ತನೊಬ್ಬ ಕನ್ನಡದಲ್ಲಿ ಪೋಸ್ಟ್ ಮಾಡಿದ್ದ ಸಂದೇಶದಲ್ಲಿ ಹಿಂದೂ ಯುವತಿಯರಿಗೆ ಎಚ್ಚರಿಕೆ ನೀಡಿದ್ದ. “ಇತರ ಧರ್ಮದ ಯುವಕರ ಜೊತೆ ಪ್ರೀತಿ-ಪ್ರೇಮವೆಂದು ತಿರುಗಾಡುತ್ತಿರುವುದು ಕಂಡು ಬಂದಲ್ಲಿ ಹೊಡೆಯದೆ ಬಿಡುವುದಿಲ್ಲ” ಎಂದು ಬರೆಯಲಾಗಿದ್ದ ವಾಟ್ಸಪ್ ಸಂದೇಶ ಮೂಡಿಗೆರೆಯಲ್ಲಿ ವೈರಲಾಗಿತ್ತು.

“ನಿಮ್ಮ ಪ್ರೀತಿಗೆ ನೂರಾರು ಕಾರಣ ನೀಡಬಹುದು. ಆದರೆ ನಾವದನ್ನು ಲೆಕ್ಕಿಸುವುದಿಲ್ಲ. ಹಿಂದೂ ಯುವತಿಯರಿಗೆ ರಕ್ಷಣೆ ನೀಡುವುದು ನಮ್ಮ ಗುರಿಯಾಗಿದೆ” ಎಂದಿರುವ ಸಂದೇಶದ ಕೊನೆಗೆ `ಧರ್ಮೋ ರಕ್ಷತಿ ರಕ್ಷಿತಃ’ ಎಂದು ಮೂಡಿಗೆರೆಯ ಆ ಬಜರಂಗಿ ಸಹಿ ಹಾಕಿದ್ದ.

ನಮ್ಮ ಸಂಘಟನೆಯ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಅನ್ಯ ಧರ್ಮೀಯರೊಂದಿಗೆ ತಿರುಗಾಡುವ ಹಿಂದೂ ಯುವತಿಯರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಜರಂಗ ದಳದ ಜಿಲ್ಲಾ ಸಂಚಾಲಕ ತುಡುಕುರ್ ಮಂಜುನಾಥ ವಾಟ್ಸಪ್ ಸಂದೇಶ ಸಮರ್ಥಿಸಿಕೊಂಡಿದ್ದಾರೆ.

“ಆತ ಮುಸ್ಲಿಂ ಯುವಕರ ಜಿಹಾದಿಯಿಂದ ಹಿಂದೂ ಯುವತಿಯರ ರಕ್ಷಿಸುವ ಹಾಗೂ ಅವರ ಒಳಿತು ಉದ್ದೇಶದಿಂದ ಈ ಸಂದೇಶ

ಪ್ರಸಾರಿಸಿರಬಹುದು. ಇಂತಹ ಯುವತಿಯರಿಗೆ ಮುಸ್ಲಿಂ ಯುವಕರು ತಲಾಖ್ ನೀಡಿರುವ ಮತ್ತು ಆ ಹೆಣ್ಮಕ್ಕಳು ಬೀದಿ ಪಾಲಾಗಿರುವ ಸಾಕಷ್ಟು ಉದಾಹರಣೆಗಳಿವೆ” ಎಂದವರು ಹೇಳಿದ್ದಾರೆ.

“ಲವ್ ಜಿಹಾದಿನಿಂದ ಹಿಂದೂ ಯುವತಿಯರನ್ನು ರಕ್ಷಿಸುವಲ್ಲಿ ಬಜರಂಗ ದಳ ಉತ್ತಮ ಕೆಲಸ ಮಾಡುತ್ತಿದೆ. ದಾರಿತಪ್ಪಿದ ಹೆಣ್ಮಕ್ಕಳಿಗೆ ಸರಿಯಾದ ದಾರಿ ತೋರಿಸುತ್ತಿದೆ” ಎಂದವರು ವಿವರಿಸಿದ್ದಾರೆ.

LEAVE A REPLY