ಜೀವ ವೈವಿಧ್ಯತೆ ಕಾಪಾಡಿ

ಜೀವ ವೈವಿಧ್ಯತೆಯಲ್ಲಿ ಮರಗಳಿಗೆ ತಮ್ಮದೇ ಆದ ಮಹತ್ವವಿದೆ  ಮರಗಳಿಂದ ಉತ್ತಮ ಗಾಳಿ  ನೆರಳು ದೊರೆಯುತ್ತದೆ  ಮಳೆಯಲ್ಲೂ ಮರಗಳ ಪ್ರಭಾವವಿದೆ  ಮರಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ  ಮರದ ಬೇರುಗಳು ನೀರನ್ನು ಹಿಡಿದಿಟ್ಟುಕೊಂಡು ನಂತರ ನೀರು ಬಿಡುವುದರ ಮೂಲಕ ಪರೋಕ್ಷವಾಗಿ ಅಂತರ್ಜಲ ಹೆಚ್ಚಲು ಕಾರಣವಾಗಿದೆ  ಮರಗಳಿಗೆ ಸಾಮಾಜಿಕವಾಗಿ  ಶಾಸ್ತ್ರೀಯವಾಗಿ  ವೈದ್ಯಕೀಯವಾಗಿಯೂ ಮಹತ್ವವಿದೆ  ಮರಗಳು ನಮ್ಮ ಜೀವನದಲ್ಲೂ ಹಾಸು ಹೊಕ್ಕಾಗಿವೆ  ಮರಗಳು ಸಾವಿರಾರು ಜೀವ ಪ್ರಬೇಧಗಳ ಅವಾಸಸ್ಥಾನವಾಗಿವೆ  ಅದೇ ರೀತಿ ಹಲವು ಕ್ರಿಮಿ ಕೀಟಗಳಿಗೂ  ಪ್ರಾಣಿ ಪಕ್ಷಿಗಳಿಗೂ ಆಧಾರವಾಗಿವೆ
ಆದರೆ  ಕೆಲವರು ತಮ್ಮ ಮನೆಗೆ ಬಣ್ಣ ಬಳಿಯುವಾಗ ಅಥವಾ ಆಕಸ್ಮಾತ್ ಒಡೆದ ದೇವರ ಪೋಟೋಗಳು  ಮೂರ್ತಿಗಳನ್ನು ಮರದ ಬುಡಕ್ಕೆ ತಂದು ಹಾಕುತ್ತಾರೆ  ಒಡೆದ ಕನ್ನಡಿಗಳು  ಕೆಲವು ರಾಸಾಯನಿಕ ವಸ್ತುಗಳು ಮರದ ಬೆಳವಣಿಗೆಗೆ ಆಡಚಣೆ ಉಂಟು ಮಾಡುತ್ತವೆ  ಆದ್ದರಿಂದ ಇಂತಹ ಒಣಕಸದ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗಬೇಕಿದೆ  ಇನ್ನಾದರೂ ಈ ರೀತಿಯ ಪರಿಪಾಠಗಳನ್ನು ಸಾರ್ವಜನಿಕರು ನಿಲ್ಲಿಸಬೇಕು ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು

  • ಗೋಪಿನಾಥ ಪಡಂಗ
    ಕಿಲ್ಪಾಡಿ