ವೇಶ್ಯಾವಾಟಿಕೆ ಕೇಂದ್ರಕ್ಕೆ ಪೊಲೀಸ್ ದಾಳಿ, ಇಬ್ಬರು ಯುವತಿಯರ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಡೀಲ್ ಎಂಬಲ್ಲಿನ ಫ್ಲ್ಯಾಟಿನಲ್ಲಿನ ವೇಶ್ಯಾವಾಟಿಕೆ ಅಡ್ಡೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.

ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಅಡ್ಯಾರ್ ಪದವು ನಿವಾಸಿ ಅಬ್ದುಲ್ ನಾಸಿರ್ ಯಾನೆ ಖಾನ್ (36), ಗೋಳಿಪಡ್ಪು ನಿವಾಸಿ ಇಸ್ಮಾಯಿಲ್ ಯಾನೆ ಅಝ್ಮಾಲ್ (36), ಬೆಂಗಳೂರು ನಿವಾಸಿ ಸಮೀರ್ ಬಾಷಾ ಯಾನೆ ಬಾಷಾ(28)ನನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 21,750 ರೂಪಾಯಿ ನಗದು ಹಣ ಸೇರಿದಂತೆ 5 ಮೊಬೈಲ್ ಹಾಗೂ ಒಟ್ಟು 36,750 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.