ವಿವಾಹ ಸಿದ್ಧತೆ ಮಧ್ಯೆ ಯುವಕ ಆತ್ಮಹತ್ಯೆ

ಮೃತ ಮಣಿಕಂಠ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿವಾಹ ಸಿದ್ಧತೆಯ ಮಧ್ಯೆ ಯುವಕನೊಬ್ಬ ಕ್ಲಬ್ ಕಟ್ಟಡದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಬಂದಡ್ಕ ಶಂಕರಪಾಡಿಯ ಎಚ್ ಮಣಿಕಂಠ (29) ಸಾವನ್ನಪ್ಪಿದ ದುರ್ದೈವಿ. ಕುತ್ತಿಕೋಲ್ ಗ್ರಾಮ ಪಂಚಾಯತ್   ನೌಕರರಾಗಿದ್ದ ಇವರಿಗೆ ವಿವಾಹ ನಿಶ್ಚಯವಾಗಿತ್ತು. ಡಿಸೆ0ಬರ್ 22ರಂದು ವಿವಾಹ ನಡೆಯಬೇಕಿತ್ತು.

ಶುಕ್ರವಾರ ರಾತ್ರಿ ತಡರಾತ್ರಿ ತನಕ ಮಣಿಕಂಠ ಕ್ಲಬ್ಬಿನಲ್ಲೇ ಉಳಿದುಕೊಂಡಿದ್ದರು. ಜೊತೆಗಿದ್ದವರು ರಾತ್ರಿ ಮನೆಗೆ ತೆರಳಿದ್ದರು.

ಆದರೆ ಬೆಳಿಗ್ಗೆ ತನಕ ಮನೆಗೆ ತಲುಪದೇ ಇದ್ದುದರಿಂದ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಕೊನೆಗೆ ಕ್ಲಬ್ಬಿಗೆ ಬಂದಾಗ ಶಟರ್ ಅರ್ಧದಷ್ಟು ಮುಚ್ಚಿರುವುದು ಕಂಡುಬಂದಿದೆ.

ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.