ಗೊಮಟೇಶ್ವರ ರೈಲು ಸಂಚಾರ ವಿಸ್ತರಣಾ ಪ್ರಸ್ತಾವ ತಿರಸ್ಕಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಾರದಲ್ಲಿ ಮೂರು ಬಾರಿ ಓಡಾಡುವ ಯಶವಂತಪುರ-ಮಂಗಳೂರು ಜಂಕ್ಷನ್ ಯಶವಂತಪುರ ಗೋಮಟೇಶ್ವರ ಎಕ್ಸಪ್ರೆಸ್ಸನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ವಿಸ್ತರಿಸುವ ಪಾಲಕ್ಕಾಡ್ ವಿಭಾಗದ ಪ್ರಸ್ತಾವ ದಕ್ಷಿಣ ರೈಲ್ವೇ ಪ್ರಧಾನ ಕಚೇರಿಯಿಂದ ತಿರಸ್ಕರಿಸಲ್ಪಟ್ಟಿದೆ. ಕೇಂದ್ರದಲ್ಲಿ ರೈಲ್ವೇ ಸಚಿವರಾಗಿದ್ದ ಸದಾನಂದ ಗೌಡ ಈ ರೈಲು ವಿಸ್ತರಣೆ ಪ್ರಕಟಣೆ ಹೊರಡಿಸಿದ್ದರು.

ರೈಲುಗಳ ವಿಸ್ತರಣೆಗೆ ಟರ್ಮಿನಸ್ ಬದಲಿಸಬೇಕಿದ್ದು, ಈ ಬಗ್ಗೆ ಡಿಆರ್ಯೂಸಿ ಪ್ರಸ್ತಾವ ಸಲ್ಲಿಸಿದೆ. ಆದರೆ, ಟರ್ಮಿನಸ್ ಬದಲಾವಣೆಗೆ ಡಿಆರ್ಯೂಸಿ ಪ್ರಸ್ತಾವಿಸಬಹುದಾದ ನಿಯಮವಿಲ್ಲ ಎಂದು ರೈಲ್ವೇ ಮಂಡಳಿ ಹೇಳಿದೆ.

ಆದರೆ ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಚೆನ್ನೈ ಎಗ್ಮೋರೆ ಡೈಲಿ ಎಕ್ಸಪ್ರೆಸ್, ಪುದುಚೇರಿ-ಮಂಗಳೂರು ಸೆಂಟ್ರಲ್-ಪುದುಚೇರಿ ಸಾಪ್ತಾಹಿಕ ಎಕ್ಸಪ್ರೆಸ್ ಮತ್ತು ಮಂಗಳೂರು ಸೆಂಟ್ರಲ್-ಕಚೆಗುಡ-ಮಂಗಳೂರು ಸೆಂಟ್ರಲ್ ರೈಲು ಸ್ಥಳಾಂತರಿಸುವ ಪ್ರಸ್ತಾವ ತಳ್ಳಿಹಾಕಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಇದೆ ಎಂದು ರೈಲ್ವೇ ವಲಯ ಹೇಳಿದೆ.

ಆದರೆ ಮಂಗಳೂರು ಜಂಕ್ಷನಿನ ಗೋಮಟೇಶ್ವರ ಎಕ್ಸಪ್ರೆಸ್ಸನ್ನು ಮಂಗಳೂರು ಜಂಕ್ಷನ್ನಿಗೆ ಸ್ಥಳಾಂತರಿಸಿದರೆ, ಪ್ರಯಾಣಿಕರಿಗೆ ನಾನಾ ರೀತಿಯ ಅನನುಕೂಲವಾಗಲಿದೆ ಎಂದು ರೈಲ್ವೇ ವಲಯ ಪ್ರಧಾನ ಕಚೇರಿ ಮೂಲಗಳು ಹೇಳಿದೆ.

`ಇಚ್ಛಾಶಕ್ತಿ ಕೊರತೆ’

“ರೈಲ್ವೇ ಪ್ರಯಾಣಿಕರು, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಈ ಬೇಡಿಕೆ ಮುಂದಿಟ್ಟಿತ್ತು. ಮಂಗಳೂರು ಜಂಕ್ಷನಿನಿಂದ ಗೋಮಟೇಶ್ವರ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಸಾಕಷ್ಟು ತೊಂದರೆಯಾಗುತ್ತಿದ್ದು, ಇದನ್ನು ಮಂಗಳೂರು ಸೆಂಟ್ರಲಿಗೆ ಬದಲಿಸಬೇಕು. ಮಂಗಳೂರು ಸೆಂಟ್ರಲಿಗೆ ಇದು ಆಗಮಿಸಿದರೆ ಪ್ರಯಾಣಿಕರಿಗೆ ಮತ್ತು ರೈಲ್ವೇಗೆ ಹೆಚ್ಚಿನ ಲಾಭವಾಗಲಿದೆ. ಮಂಗಳೂರು ಜಂಕ್ಷನಿನಲ್ಲಿ ಈ ರೈಲಿಗೆ ಪಾರ್ಕಿಂಗ್ ವ್ಯವಸ್ಥೆ ಇರದಿದ್ದರೆ, ರಾತ್ರಿ ಪೂರ್ತಿ ಮಂಗಳೂರು ಜಂಕ್ಷನಿನಲ್ಲಿ ನಿಲ್ಲಿಸಿ, ಹೊರಡುವ ಹೊತ್ತಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತರಬಹುದು. ಪ್ಲಾಟ್ಫಾರ್ಮ್ ಅಲಭ್ಯವೆಂಬುದು ನೆವ ಮಾತ್ರ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಹೇಳಿದರು.