ದ ಕ ಜಿಲ್ಲಾ ಪೊಲೀಸರಲ್ಲೂ ಸಂಚಲನ ಮೂಡಿಸಿದ ಬಡ್ತಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ರಾಜ್ಯ ಗೃಹ ಇಲಾಖೆ ಇದೀಗ ಪೊಲೀಸ್ ಸಿಬ್ಬಂದಿಗೆ ಬಡ್ತಿ ಅವಕಾಶ ನೀಡಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ರಾಜ್ಯದ 11 ಸಾವಿರ ಪೊಲೀಸರ ನೇಮಕಕ್ಕೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಗಳು ಮುಖ್ಯಪೇದೆಗೆ, ಮುಖ್ಯ ಪೇದೆಗಳು ಸಹಾಯಕ ಸಬ್ ಇನಸ್ಪೆಕ್ಟರ್, ಸಹಾಯಕ ಸಬ್ ಇನಸ್ಪೆಕ್ಟರುಗಳು ಸಬ್ ಇನಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.
ದ ಕ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 23 ಆಮ್ರ್ಡ್ ಪೊಲೀಸ್ ಕಾನಸ್ಟೇಬಲ(ಎಪಿಸಿ)ಗಳು ಆಮ್ರ್ಡ್ ಹೆಡ್ ಕಾನಸ್ಟೇಬಲ್(ಎ ಎಚ್ ಸಿ) ಹುದ್ದೆಗೆ ಭಡ್ತಿ ಹೊಂದಲಿದ್ದಾರೆ. ಇನ್ನು ಹಲವು ಎ ಎಚ್ ಸಿ.ಗಳು ಅಸಿಸ್ಟೆಂಟ್ ರಿಸರ್ವ್ ಸಬ್ ಇನಸ್ಪೆಕ್ಟರ್ ಆಗಿ ಬಡ್ತಿ ಹೊಂದಲಿದ್ದಾರೆ. 30 ಸಿವಿಲ್ ಪೊಲೀಸ್ ಪೇದೆಗಳು (ಸಿಪಿಸಿ) ಸಿವಿಲ್ ಹೆಡ್ ಕಾನಸ್ಟೇಬಲು(ಸಿ ಎಚ್ ಸಿ)ಗಳಾಗಿ ಮತ್ತು 13 ಸಿ ಎಚ್ ಸಿ.ಗಳು ಅಸಿಸ್ಟೆಂಟ್ ಸಬ್ ಇನಸ್ಪೆಕ್ಟರ್ (ಎ ಎಸ್ ಐ) ಆಗಿ ಬಡ್ತಿ ಹೊಂದಲಿದ್ದಾರೆ.
ಮಂಗಳೂರು ಸಿಟಿ ಪೊಲೀಸ್ ಯೂನಿಟ್ಟಿನಲ್ಲಿ ಆಯುಕ್ತರು 133 ಸಿಪಿಸಿ.ಗಳನ್ನು ಸಿ ಎಚ್ ಸಿ.ಗಳನ್ನಾಗಿ ಮತ್ತು 45 ಸಿ ಎಚ್ ಸಿ.ಗಳನ್ನು ಎ ಎಸ್ ಐ.ಗಳನ್ನಾಗಿ ಬಡ್ತಿಗೊಳಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ 225 ಮಂದಿ ಸಿ ಎಚ್ ಸಿ, ಎ ಎಸ್ ಐ ರ್ಯಾಂಕಿನ 79 ಮಂದಿ, ಎ ಎಸ್ ಐ.ನಿಂದ ಪಿ ಎಸ್ ಐ ರ್ಯಾಂಕಿಗೆ 26 ಮಂದಿ ಬಡ್ತಿ ಹೊಂದಲಿದ್ದಾರೆ. ಒಬ್ಬ ಎಪಿಸಿ ಎ ಎಚ್ ಸಿ.ಯಾಗಿ, 38 ಎ ಎಚ್ ಸಿ.ಗಳು ಎ ಆರ್ ಎಸ್ ಐ.ಗಳಾಗಿ ಒಟ್ಟು 369 ಮಂದಿ ಬಡ್ತಿ ಹೊಂದಲಿದ್ದಾರೆ. ಆದರೆ ಎ ಆರ್ ಎಸ್ ಐ ಮಟ್ಟದ ಅಧಿಕಾರಿಗಳು ರಿಸರ್ವ್ ಸಬ್ ಇನಸ್ಪೆಕ್ಟರ್ ಆಗಿ ಬಡ್ತಿ ಹೊಂದುತ್ತಿಲ್ಲ ಎಂದು ಅಂಕಿ ಅಂಶಗಳಿಂದ ಗೊತ್ತಾಗಿದೆ.