ಗ್ರಾಮೀಣ ಬ್ಯಾಂಕ್ ಕಳವು ಯತ್ನ ; ಪೊಲೀಸ್ ತನಿಖೆ

ಪೆÇಲೀಸ್ ಅಧಿಕಾರಿಗಳಿಂದ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳ ಗ್ರಾಮೀಣ ಬ್ಯಾಂಕ್ ಮುಳ್ಳೇರಿಯ ಶಾಖೆಯಲ್ಲಿ ನಡೆದ ಕಳವು ಯತ್ನ ಬಗ್ಗೆ ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೆÇ್ರಫೆಶನಲ್ ಕಳವು ತಂಡವನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದು, ಇತರ ಸಾಧ್ಯತೆಗಳನ್ನು ಪರಿಗಣಿಸಲಾಗಿದೆ.

ಬ್ಯಾಂಕಿನ ಸೀಸಿ ಟೀವಿಯಲ್ಲಿ ದಾಖಲಾದ ದೃಶ್ಯವನ್ನು ಪರಿಶೀಲಿಸಿದ್ದು, ಇದರಲ್ಲಿ ಕಳ್ಳನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಇಬ್ಬರು ವ್ಯಕ್ತಿಗಳಿರುವುದಾಗಿ ಕಂಡುಬಂದಿದ್ದು, ತುಂಬು ತೋಳಿನ ಶರ್ಟ್, ಕೈ ಕವಚ  ಧರಿಸಿದ್ದಾರೆ. ಇದೇ ಬ್ಯಾಂಕ್ ಸಮೀಪದ ಇತರ ಸಂಸ್ಥೆಗಳಲ್ಲಿರುವ ಸೀಸಿಟೀವಿಯನ್ನು ಪರಿಶೀಲಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಬ್ಯಾಂಕ್ ಕಿಟಿಕಿ ಮುರಿಯಲು ಬಳಸಿದ ಕಬ್ಬಿಣದ ಸರಳು ಇತ್ತೀಚೆಗಷ್ಟೇ ತಯಾರಿಸಿದವುಗಳಾಗಿವೆಯೆಂದು ಅಂದಾಜಿಸಲಾಗಿದೆ. ವಾಹನದ ಆಕ್ಸಿಲ್ ಬಳಸಿ ಇದನ್ನು ತಯಾರಿಸಲಾಗಿದೆ. ದೀರ್ಘಕಾಲದಿಂದ ಕಳವು ಕೃತ್ಯದಲ್ಲಿ ತೊಡಗಿರುವ ತಂಡವೇ ಗ್ರಾಮೀಣ ಬ್ಯಾಂಕ್ ಕಳವುಯತ್ನ ನಡೆಸಿದೆಯೆಂದು ಅಂದಾಜಿಸಲಾಗಿದೆ.

ಶ್ವಾನದಳ ಬ್ಯಾಂಕಿನಿಂದ ವಾಸನೆ ಹಿಡಿದು ಸುಮಾರು 50 ಮೀಟರಿನಷ್ಟು ದೂರಕ್ಕೆ ಓಡಿ ನಿಂತಿದೆ. ಅನ್ಯ ರಾಜ್ಯ ಕಾರ್ಮಿಕರು ವಾಸಿಸುತ್ತಿದ್ದ ಸ್ಥಳದ ಬಳಿ ಓಡಿದ ಶ್ವಾನ ಗಾಡಿಗುಡ್ಡೆ ರಸ್ತೆಯಲ್ಲಿರುವ ಜಿಲ್ಲಾ ಸಹಕಾರಿ ಬ್ಯಾಂಕಿಗೇರುವ ಮೆಟ್ಟಿಲವರೆಗೆ ಸಾಗಿದೆ. ಈ ಹಿನ್ನೆಲೆಯಲ್ಲಿ ಈ ಬ್ಯಾಂಕನ್ನು ಕೂಡಾ ಗುರಿಯಿರಿಸಿ ಕಳವು ತಂಡ ಬಂದಿರಬಹುದೆಂದು ಅಂದಾಜಿಸಲಾಗಿದೆ.

ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದರೂ ಕಳ್ಳರು ಕೈಕವಚ ಧರಿಸಿದುದರಿಂದ ಬೆರಳಚ್ಚು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಮುಳ್ಳೇರಿಯಾದಲ್ಲಿ ವಾಸಿಸಿ ಇತ್ತೀಚೆಗಷ್ಟೇ ಊರಿಗೆ ತೆರಳಿದ ಅನ್ಯರಾಜ್ಯ ಕಾರ್ಮಿಕರ ಮಾಹಿತಿಯನ್ನು ಪೆÇಲೀಸರು ಸಂಗ್ರಹಿಸಿದ್ದಾರೆ. ಬ್ಯಾಂಕಿನೊಳಗೆ ಕಳ್ಳರು ಬಿಟ್ಟುಹೋದ ಚೀಲ ಹಾಗೂ ಕಬ್ಬಿಣದ ಸರಳುಗಳನ್ನು ಪೆÇಲೀಸರು ಕಸ್ಟಡಿಗೆ ತೆಗೆದಿದ್ದು, ಅವುಗಳ ಮೂಲಕ ಕಳ್ಳರ ಜಾಡು ಹಿಡಿಯುವ ಸಾಧ್ಯತೆಯಿದೆಯೆಂದು ಪೆÇಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 1.30ರ ವೇಳೆ ಬ್ಯಾಂಕಿಗೆ ಕಳ್ಳರು ನುಗ್ಗಿ ಕಳವಿಗೆತ್ನ ನಡೆಸಿದ್ದರು.